alex Certify ಕೆಲವರ ಶೀತ ಏಕೆ ಇತರರಿಗಿಂತ ಭಿನ್ನವಾಗಿರುತ್ತೆ…….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವರ ಶೀತ ಏಕೆ ಇತರರಿಗಿಂತ ಭಿನ್ನವಾಗಿರುತ್ತೆ…….?

ಶೀತ ಥಂಡಿ ಇವುಗಳ ಬಗ್ಗೆ ನಿಮಗೆ ಹೊಸದಾಗಿ ಹೇಳಬೇಕೆಂದಿಲ್ಲ. ಇದು ಎಲ್ಲರಿಗೂ ಆಗುವಂತಹದ್ದು. ಅದರಲ್ಲೂ ಚಳಿಗಾಲ ಬಂತೆಂದರೆ ಸ್ವಲ್ಪ ಜಾಸ್ತಿಯೇ ಆಗುತ್ತದೆ.

ಒಮ್ಮೆ ಶೀತ ಬಂದರೆ ದಿನಕ್ಕೆ ಏನಿಲ್ಲವೆಂದರೂ ಕನಿಷ್ಠ ನೂರು ಬಾರಿ ಮೂಗಿಗೆ ಕರ್ಚೀಫ್ ಅನ್ನು ಹಿಡಿಯಬೇಕಾಗುತ್ತದೆ. ಅಲ್ಲದೇ ವಿಪರೀತ ತಲೆನೋವು. ಕಣ್ಣೆಲ್ಲ ಒದ್ದೆ. ಹಾಗೆ ಜೀವನವೇ ಸಾಕಪ್ಪಾ ಎಂಬ ರೀತಿ ಆಗಿ ಹೋಗಿರುತ್ತದೆ.

ಆದರೆ ಹೀಗೆ ಆಗಲು ನಿಜಕ್ಕೂ ಕಾರಣವೇನು ಎಂಬುದು ನಿಮಗೆ ಗೊತ್ತಾ? ಸಂಶೋಧಕರು ಅಧ್ಯಯನ ಮಾಡಿ ಇದಕ್ಕೆ ಕಾರಣವನ್ನು ಕಂಡುಕೊಂಡಿದ್ದಾರೆ.

ಶೀತದ ತೀವ್ರತೆ ಹೆಚ್ಚಳಕ್ಕೆ ನಿಮ್ಮ ಮೂಗಿನೊಳಗೆ ಅತಿ ಸೂಕ್ಷ್ಮ ಜೀವಾಣುಗಳು ಇರುವುದೇ ಕಾರಣ ಎಂಬ ಸತ್ಯವನ್ನು ಸಂಶೋಧಕರು ಹೊರಹಾಕಿದ್ದಾರೆ. ವರ್ಜಿನಿಯಾ ಹೆಲ್ತ್ ಸಿಸ್ಟಮ್ ಎಂಬ ವಿಶ್ವವಿದ್ಯಾಲಯದ ತಂಡವೊಂದು ಈ ಅಧ್ಯಯನವನ್ನು ಮಾಡಿತ್ತು.

ಈ ಅಧ್ಯಯನದ ಪ್ರಕಾರ ಕೆಲವರ ಮೂಗಿನೊಳಗೆ ನೈಸರ್ಗಿಕವಾಗಿ ಸೂಕ್ಷ್ಮಜೀವಿಗಳು ಸೃಷ್ಟಿಯಾಗುತ್ತವೆ. ಇವುಗಳನ್ನು ಒಟ್ಟು ಆರು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ.

ಇದಕ್ಕಾಗಿ ಸಂಶೋಧಕರು 152 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಅವರಿಗೆ ಶೀತ ಬರುವ ವೈರಾಣುವನ್ನು ಕೊಟ್ಟು ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದಾರೆ. ಆಗ ಕೆಲವರು ಮೂಗಿನಲ್ಲಿ ವಿಧವಿಧವಾದ ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗಿರುವುದು ಬೆಳಕಿಗೆ ಬಂದಿದೆ. ಶೀತಕ್ಕೆ ಹಲವಾರು ಮಾತ್ರೆ ಔಷಧಿಗಳು ಇವೆಯಾದರು ಸಹ ಕೆಲವೊಬ್ಬರು ಮನೆಮದ್ದಿಗೆ ಮೊರೆ ಹೋಗುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...