alex Certify ಆರೋಗ್ಯಕರ ʼಮೊಳಕೆʼ ಕಾಳುಗಳ ವಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ʼಮೊಳಕೆʼ ಕಾಳುಗಳ ವಡೆ

ಸಂಜೆ ಹೊತ್ತಿನಲ್ಲಿ ಕಾಫಿ ಜೊತೆ ಬಜ್ಜಿ, ಪಕೋಡ, ವಡೆ ಸವಿಯುವ ಮಜವೇ ಬೇರೆ. ಅದರಲ್ಲೂ ಬಾಯಿ ರುಚಿ ಜೊತೆ ಆರೋಗ್ಯಕ್ಕೂ ಹಿತವಾಗಿದ್ದರೆ, ಎಲ್ಲರೂ ಇನ್ನೆರಡು ವಡೆ ಜಾಸ್ತಿನೇ ಸವಿಯುತ್ತಾರೆ.

ಇಲ್ಲಿದೆ ನೋಡಿ ರುಚಿಕರ ಹಾಗೂ ಆರೋಗ್ಯಕರ ಮೊಳಕೆ ಕಾಳುಗಳ ವಡೆ ಮಾಡುವ ವಿಧಾನ.

ಬೇಕಾಗುವ ಸಾಮಾಗ್ರಿಗಳು:

ಮೊಳಕೆ ಬಂದ ಹೆಸರುಕಾಳು – 1/2 ಕಪ್
ಮೊಳಕೆ ಬಂದ ಮಡಕೆಕಾಳು – 1/2 ಕಪ್
ಉದ್ದಿನ ಬೇಳೆ – 1/2 ಕಪ್
ಕಡಲೆ ಬೇಳೆ – 3 ಚಮಚ
ಕತ್ತರಿಸಿದ ಮೆಂತ್ಯೆ ಸೊಪ್ಪು – 3 ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – 3 ಚಮಚ
ಕತ್ತರಿಸಿದ ಪುದೀನಾ ಸೊಪ್ಪು – 2 ಚಮಚ
ಅಚ್ಚ ಖಾರದ ಪುಡಿ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಕತ್ತರಿಸಿದ ತೆಂಗಿನಕಾಯಿ ತುಂಡುಗಳು – 1/2 ಕಪ್
ಎಣ್ಣೆ – ಕರಿಯಲು

ಮಾಡುವ ವಿಧಾನ:

ಕಾಳುಗಳು ಹಾಗೂ ಬೇಳೆಗಳನ್ನು ಆರು ಗಂಟೆ ನೆನೆಯಲು ಬಿಡಬೇಕು. ಬಳಿಕ ನೀರನ್ನು ಬಸಿದು ಗಟ್ಟಿಯಾಗಿ ಮಿಕ್ಸಿಯಲ್ಲಿ ಅರೆಯಬೇಕು. ಅರೆದ ಮಿಶ್ರಣಕ್ಕೆ ಕತ್ತರಿಸಿದ ಸೊಪ್ಪುಗಳು, ಉಪ್ಪು, ಖಾರದ ಪುಡಿ, ತೆಂಗಿನಕಾಯಿ ತುಂಡುಗಳನ್ನು ಸೇರಿಸಿ ಒಂದು ಗಂಟೆಗಳ ಕಾಲ ನೆನೆಯಲು ಬಿಡಬೇಕು.

ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ವಡೆಯಾಕಾರದಲ್ಲಿ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಮೊಳಕೆ ಕಾಳುಗಳ ವಡೆ ಸವಿಯಲು ಸಿದ್ಧ. ಕಾಯಿ ಚಟ್ನಿಯೊಂದಿಗೆ ಈ ವಡೆಯನ್ನು ತಿನ್ನಲು ಬಲು ರುಚಿಯಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...