ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ದೇವರ ಮನೆಯಲ್ಲಿ ಕೆಲವರು ದೇವರ ಮೂರ್ತಿಗಳನ್ನು ಇಟ್ಟುಕೊಂಡ್ರೆ ಕೆಲವರು ಫೋಟೋಗಳಿಗೆ ಪೂಜೆ ಮಾಡ್ತಾರೆ. ಆದ್ರೆ ಯಾವ ದೇವರ ಮೂರ್ತಿ ಮನೆಯಲ್ಲಿ ಇರಬೇಕು? ಎಷ್ಟು ಇರಬೇಕೆಂಬುದು ಅನೇಕರಿಗೆ ತಿಳಿದಿಲ್ಲ.
ಮನೆಯಲ್ಲಿ ಗಣೇಶನ ಮೂರ್ತಿ ಇಡುವುದು ಬಹಳ ಶುಭಕರ. ಬಹುತೇಕರ ಮನೆಯ ದೇವರ ಪೀಠದಲ್ಲಿ ಗಣೇಶನ ಅನೇಕ ಮೂರ್ತಿಗಳು ಇರುತ್ತವೆ. ಮನೆಯಲ್ಲಿ ಒಂದೇ ಒಂದು ಗಣೇಶ ಮೂರ್ತಿಗೆ ಪೂಜೆ ಮಾಡುವುದು ಒಳ್ಳೆಯದು. ಒಂದಕ್ಕಿಂತ ಹೆಚ್ಚು ಇಟ್ಟುಕೊಳ್ಳುತ್ತೇವೆ ಎನ್ನುವವರು ಬೆಸ ಸಂಖ್ಯೆಯಲ್ಲಿ ಗಣೇಶ ಮೂರ್ತಿಯನ್ನು ಇಟ್ಟುಕೊಳ್ಳಬಾರದು.
ಮನೆಯಲ್ಲಿರುವ ಶಿವಲಿಂಗ ನಮ್ಮ ಹೆಬ್ಬರಳು ಗಾತ್ರಕ್ಕಿಂತ ದೊಡ್ಡದಿರಬಾರದು. ಶಿವ ಲಿಂಗದ ಪೂಜೆ ಸುಲಭವಲ್ಲ. ಮನೆಯಲ್ಲಿ ಶಿವಲಿಂಗವಿದ್ರೆ ಅನುಷ್ಠಾನ ಹೆಚ್ಚು ಮಾಡಬೇಕಾಗುತ್ತದೆ. ದೊಡ್ಡ ಶಿವಲಿಂಗ ಹಾಗೂ ಒಂದಕ್ಕಿಂತ ಹೆಚ್ಚು ಶಿವಲಿಂಗ ಇರಬಾರದು.
ದೇವರ ಮನೆಯಲ್ಲಿ ತಾಯಿ ದುರ್ಗೆಯ ಮೂರು ಮೂರ್ತಿಗಳು ಇರಬಾರದು. ಮೂರಕ್ಕಿಂತ ಹೆಚ್ಚು ಮೂರ್ತಿಗಳನ್ನು ಇಡಬಹುದು. ಆದ್ರೆ ಮೂರು ಮೂರ್ತಿಗಳನ್ನು ಇಡಬಾರದು.