ದೀಪಾವಳಿ ಸಂಭ್ರಮ ಶುರುವಾಗಿದೆ. ಈ ಹಬ್ಬದ ದಿನಗಳಲ್ಲಿ ಮನೆಯನ್ನು ರಂಗೋಲಿಯೊಂದಿಗೆ ಅಲಂಕರಿಸುವ ಸಂಪ್ರದಾಯವಿದೆ. ಹಬ್ಬಗಳಲ್ಲಿ, ರಂಗೋಲಿಯನ್ನು ಮನೆಯ ಬಾಗಿಲಲ್ಲಿ ಹಾಕದೆ ಹೋದ್ರೆ ಹಬ್ಬ ಅಪೂರ್ಣ. ರಂಗೋಲಿಯನ್ನೂ ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಹೊರಗೆ ರಂಗೋಲಿ ಹಾಕುವುದೆಂದ್ರೆ ಮಹಾಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿದಂತೆ.
ಪ್ರತಿ ವರ್ಷ ದೀಪಾವಳಿಯಂದು ಮಹಿಳೆಯರು ಮಾ ಲಕ್ಷ್ಮಿಯನ್ನು ಸ್ವಾಗತಿಸಲು ಬಾಗಿಲಿನ ಹೊರಗೆ ಸುಂದರವಾದ ರಂಗೋಲಿ ಹಾಕ್ತಾರೆ. ಹಿಂದಿನ ಕಾಲದಲ್ಲಿ ಜನರು ತಮ್ಮ ಮನೆಯ ಬಾಗಿಲಿಗೆ ಅಕ್ಕಿ ಹಿಟ್ಟು ಮತ್ತು ಹೂವುಗಳಿಂದ ಮಾಡಿದ ರಂಗೋಲಿಯನ್ನು ಹಾಕ್ತಿದ್ದರು. ರಂಗೋಲಿ ಹಾಕುವ ಸಂಪ್ರದಾಯ ಸಾಕಷ್ಟು ಹಳೆಯದಾದರೂ, ಬದಲಾಗುತ್ತಿರುವ ಕಾಲದಲ್ಲಿ, ಅದರ ವಿನ್ಯಾಸ ಮತ್ತು ವಿಧಾನಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬಂದಿವೆ.
ಈ ಬಾರಿ ದೀಪಾವಳಿಯ ಅತ್ಯುತ್ತಮ ರಂಗೋಲಿ ವಿನ್ಯಾಸಗಳು ಯಾವುವು ಎಂಬುದನ್ನು ನೀವು ತಿಳಿದ್ರೆ ರಂಗೋಲಿ ಹಾಕುವುದು ಸುಲಭವಾಗುತ್ತದೆ. ಆಧುನಿಕ ದೀಪಗಳೊಂದಿಗೆ ರಂಗೋಲಿ ಸೌಂದರ್ಯ ಹೆಚ್ಚಾಗುತ್ತದೆ. ಸುಂದರವಾದ ರಂಗೋಲಿಯಿಂದ ಬಾಗಿಲನ್ನು ಅಲಂಕರಿಸಬಹುದು. ಹ್ಯಾಪಿ ದೀಪಾವಳಿಯನ್ನು ಬಣ್ಣದಿಂದ ಬರೆಯಬಹುದು. ಹೂ, ವಿವಿಧ ಧಾನ್ಯಗಳಿಂದಲೂ ರಂಗೋಲಿ ಬಿಡಿಸಬಹುದು.