ಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟಈ ಅಂಗ ದೊಡ್ಡದಿರುವ ಮಹಿಳೆಯರು ಅದೃಷ್ಟ
ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಯಾವ ಮನೆಯಲ್ಲಿ ಮಹಿಳೆಗೆ ಗೌರವ ನೀಡಲಾಗುತ್ತದೆಯೋ ಆ ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಿರುತ್ತದೆ. ಹಾಗೆ ಮಹಿಳೆಯರ ದೇಹದ ಮೇಲಿರುವ ಕೆಲ ಗುರುತುಗಳು ಅವ್ರು ಭಾಗ್ಯಶಾಲಿಗಳಾ ಎಂಬುದನ್ನು ಹೇಳುತ್ತದೆ. ಮಹಿಳೆಯರ ದೇಹದ ಅಂಗಗಳು ಅವ್ರ ಸೌಭಾಗ್ಯ, ಅದೃಷ್ಟವನ್ನು ಹೇಳುತ್ತವೆ.
ಯಾವ ಮಹಿಳೆ ಕೈ ಉದ್ದವಾಗಿರುತ್ತದೆಯೋ ಆ ಮಹಿಳೆ ಸೌಭಾಗ್ಯ ಹಾಗೂ ಸಮೃದ್ಧಿ ನೀಡುತ್ತಾಳಂತೆ.
ಉದ್ದವಾದ ಕಾಲುಗಳು ಹಾಗೂ ಕೋಮಲ ಪಾದಗಳನ್ನು ಹೊಂದಿರುವ ಮಹಿಳೆಯನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ.
ದೊಡ್ಡ ಹಣೆಯುಳ್ಳ ಮಹಿಳೆಯರನ್ನು ಸೌಭಾಗ್ಯಶಾಲಿಗಳು ಎನ್ನುತ್ತಾರೆ. ಸಂಪತ್ತಿನ ಸೂಚಕವೆನ್ನುತ್ತಾರೆ.
ಉದ್ದನೆಯ ಕುತ್ತಿಗೆ ಹೊಂದಿದ ಮಹಿಳೆ ಸಮೃದ್ಧಿಯನ್ನು ಅನುಭವಿಸುತ್ತಾರಂತೆ.
ಉದ್ದದ ಕಿವಿ ಹೊಂದಿರುವ ಮಹಿಳೆ ಕೂಡ ಭಾಗ್ಯಶಾಲಿ ಹಾಗೂ ಸೌಭಾಗ್ಯಶಾಲಿಯಾಗಿರುತ್ತಾಳಂತೆ.
ಉದ್ದನೆಯ ಕೂದಲು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗೆ ಆಕೆ ಸೌಭಾಗ್ಯವತಿ ಎಂಬುದರ ಸಂಕೇತವಾಗಿದೆ. ಇದೇ ಕಾರಣಕ್ಕೆ ದೇವತೆಗಳ ಕೂದಲನ್ನು ಉದ್ದವಾಗಿ ತೋರಿಸಲಾಗುತ್ತದೆ.
ಮಹಿಳೆ ಹೊಕ್ಕಳು ದೊಡ್ಡದಾಗಿದ್ದು, ಆಳವಾಗಿದ್ದು ಮತ್ತು ಬಲಕ್ಕೆ ತಿರುಗಿದ್ದರೆ ಆಕೆಯನ್ನು ಸೌಭಾಗ್ಯಶಾಲಿ ಎನ್ನಲಾಗುತ್ತದೆ.