ಇತ್ತೀಚೆಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಎಸ್.ಬಿ.ಐ. ತನ್ನ ಗ್ರಾಹಕರಿಗೆ ಎಚ್ಚರಿಕೆ ಸಂದೇಶ ನೀಡಿದೆ.
ಯಾವುದನ್ನು ಮಾಡಬೇಕು ಹಾಗೂ ಯಾವುದನ್ನು ಮಾಡಬಾರದು ಎಂಬ ಸಲಹೆಯನ್ನು ಕೊಟ್ಟಿದೆ. ಅದರಲ್ಲೂ ಪ್ರಮುಖವಾಗಿ ಎಟಿಎಂ ಹಾಗೂ ಆನ್ ಲೈನ್ ಟ್ರಾನ್ಸಾಕ್ಷನ್ ನಲ್ಲಿ ಹೇಗಿರಬೇಕು ಎಂದು ತಿಳಿ ಹೇಳಿದೆ. ಇಲ್ಲದಿದ್ದರೆ ಹಣ ನಿಮಿಷದಲ್ಲೇ ಖಾಲಿಯಾಗುವ ಬಗ್ಗೆಯೂ ಎಚ್ಚರಿಕೆಯನ್ನು ಕೊಟ್ಟಿದೆ.
ಪಬ್ಲಿಕ್ ಇಂಟರ್ನೆಟ್ ಡಿವೈಸ್ ಬಳಸುವಾಗ ಎಚ್ಚರವಿರಲಿ. ಯಾವುದೇ ಕಾರಣಕ್ಕೂ ಅಂಥ ಸಂದರ್ಭದಲ್ಲಿ ಎಸ್.ಬಿ.ಐ. ಆನ್ ಲೈನ್ ವ್ಯವಹಾರವನ್ನು ಮಾಡಕೂಡದು. ಉಚಿತ ವೈಫೈ ಜೋನ್ ಸಿಕ್ಕರೂ ವ್ಯವಹಾರಕ್ಕೆ ಬಳಸಬಾರದು. ಇದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು.
ಇದಲ್ಲದೆ ಒಟಿಪಿ, ಪಿನ್ ನಂಬರ್, ಸಿವಿವಿ, ಯುಪಿಐ ಪಿನ್ ಇವುಗಳ ಬಗ್ಗೆಯೂ ಯಾರೇ ಕರೆ ಮಾಡಿದರೂ ಮಾಹಿತಿ ಕೊಡಬಾರದು. ಒಮ್ಮೆ ಕೊಟ್ಟರೆ ಕ್ಷಣಾರ್ಧದಲ್ಲಿ ಹಣ ಮಾಯವಾಗುತ್ತದೆ.
ಇನ್ನೊಂದು ಪ್ರಮುಖ ಸಂಗತಿ ಎಂದರೆ ನಿಮ್ಮ ಫೋನಿನಲ್ಲಿ ಯಾವುದೇ ರೀತಿಯ ಖಾತೆಯ ಬಗ್ಗೆ ಮಾಹಿತಿಯನ್ನು ಇಟ್ಟುಕೊಳ್ಳಬಾರದು. ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ಪಿನ್, ಸಿವಿವಿ ನಂಬರ್ ಇತ್ಯಾದಿ ಮಾಹಿತಿಗಳನ್ನು ಫೋಟೋ ಹೊಡೆದು ಸಹ ಇಟ್ಟುಕೊಳ್ಳಬಾರದು ಎಂಬ ಎಚ್ಚರಿಕೆ ಸಂದೇಶವನ್ನು ಎಸ್.ಬಿ.ಐ. ನೀಡಿದೆ.