ಸಾಮಾನ್ಯವಾಗಿ ಅಸಹಜ ಸಾವು ಸಂಭವಿಸಿದಾಗ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಯ ಸಾವಿನ ಕಾರಣ ತಿಳಿಯಲು ಈ ಪರೀಕ್ಷೆ ಸಹಕಾರಿ. ಮೃತ ವ್ಯಕ್ತಿಯ ಮೈ ಮೇಲಿನ ಗಾಯ, ಕಲೆ ಮತ್ತು ಸೇವಿಸಿದ ಆಹಾರದ ಆಧಾರದ ಮೇಲೆ ಪರೀಕ್ಷೆ ಮಾಡಲಾಗುತ್ತದೆ. ಇದನ್ನು ನುರಿತ ಪೈಥಾಲೋಜಿಸ್ಟ್ ಡಾಕ್ಟರ್ ಗಳು ಮಾಡುತ್ತಾರೆ.
ಮರಣೋತ್ತರ ಪರೀಕ್ಷೆಯನ್ನು ಬೆಳಿಗ್ಗೆ ಮಾತ್ರ ಮಾಡಲಾಗುತ್ತದೆ. ರಾತ್ರಿ ಸಮಯದಲ್ಲಿ ಮಾಡುವುದಿಲ್ಲ. ಇದಕ್ಕೆ ಕಾರಣವಿದೆ. ತಜ್ಞರ ಪ್ರಕಾರ, ವ್ಯಕ್ತಿ ಮರಣ ಹೊಂದಿದ ಆರರಿಂದ ಹತ್ತು ಗಂಟೆಗಳ ಒಳಗೆ ಮರಣೋತ್ತರ ಪರೀಕ್ಷೆ ನಡೆಯಬೇಕು.
ಏಕೆಂದರೆ ತುಂಬಾ ಸಮಯದ ನಂತರ ಶವ ಸ್ವಾಭಾವಿಕ ಬದಲಾವಣೆ ಹೊಂದುತ್ತದೆ. ರಾತ್ರಿಯಲ್ಲಿ ಟ್ಯೂಬ್‌ಲೈಟ್ ಅಥವಾ ಎಲ್‌ಇಡಿಯಂತಹ ಕೃತಕ ಬೆಳಕಿನಲ್ಲಿ ಗಾಯದ ಬಣ್ಣವು ಕೆಂಪು ಬಣ್ಣಕ್ಕೆ ಬದಲಾಗಿ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಆದ್ರೆ ಫಾರೆನ್ಸಿಕ್ ಸೈನ್ಸ ಪ್ರಕಾರ ಗಾಯ ಯಾವಾಗಲೂ ನೇರಳೆ ಬಣ್ಣದಲ್ಲಿರಲು ಸಾಧ್ಯವಿಲ್ಲ. ಬೆಳಗಿನ ಸಮಯದಲ್ಲಿ ಗಾಯ ಅಥವಾ ಕಲೆ ಗುರುತುಗಳು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಅನೇಕ ಧರ್ಮಗಳಲ್ಲಿ ರಾತ್ರಿಯಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಮಾಡಲಾಗುವುದಿಲ್ಲ. ಹಾಗಾಗಿ ರಾತ್ರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುವುದಿಲ್ಲ.