ಮೊಡವೆ ಹದಿಹರೆಯದಲ್ಲಿ ಸಾಮಾನ್ಯ ಸಮಸ್ಯೆ. 14ರಿಂದ 30 ವರ್ಷದೊಳಗೆ ಈ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಅನೇಕರು ಮೊಡವೆಯಿಂದ ಮುಕ್ತಿಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಿಂತ ಮೊಡವೆಗೆ ಮನೆ ಮದ್ದು ಬೆಸ್ಟ್.
ಅಲೋವೇರಾ ಜೆಲ್, ಕಲೆಗಳನ್ನು ತೆಗೆದು ಹಾಕಲು ಸಹಕಾರಿ. ಅಲೋವೇರಾ ಜೆಲ್ ನಿಂದ ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಲೋವೇರಾ ಜೆಲ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ಮೊಡವೆ, ಅದ್ರ ಕಲೆ ಕಡಿಮೆ ಮಾಡುವ ಜೊತೆಗೆ ಮುಖಕ್ಕೆ ಗ್ಲೋ ನೀಡುತ್ತದೆ. ಮುಲ್ತಾನ್ ಮಿಟ್ಟಿ ಜೊತೆ ಇದನ್ನು ಬೆರೆಸಿ ಹಚ್ಚಿಕೊಳ್ಳುವುದು ಒಳ್ಳೆಯದು.
ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಅರಿಶಿನ ಪರಿಹಾರ ನೀಡುತ್ತದೆ. ಮೊಡವೆಗಳನ್ನು ಹೋಗಲಾಡಿಸಲು ಇದು ಸಹಕಾರಿ. ಅರಿಶಿನಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ಮಾಡಿ ದಿನಕ್ಕೆ 2-3 ಬಾರಿ ಹಚ್ಚಿಕೊಳ್ಳಬೇಕು. ಇದ್ರಿಂದ ಮೊಡವೆ ಒಣಗಿ ಒಂದು ದಿನಗಳೊಳಗೆ ನಿಮ್ಮ ಮುಖ ಕಾಂತಿ ಪಡೆಯುತ್ತದೆ.
ಐಸ್ ಕೂಡ ಮೊಡವೆ ಹೋಗಲಾಡಿಸುವಲ್ಲಿ ಸಹಕಾರಿ. ಐಸ್ ತುಂಡನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಮೊಡವೆ ಮೇಲೆ ಇಡಬೇಕು. ದಿನದಲ್ಲಿ 4-5 ಬಾರಿ ಹೀಗೆ ಮಾಡುವುದ್ರಿಂದ ಮೊಡವೆ ಕಡಿಮೆಯಾಗುತ್ತದೆ.