ಮಳೆಗಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಗಂಟಲಿನಲ್ಲಿ ಕೆಲವರಿಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಗಂಟಲು ಒಣಗಿ ನೀರು ಕುಡಿಯಲೂ ಕಷ್ಟವಾಗುತ್ತದೆ. ನೋವು ಜೀವ ಹಿಂಡುತ್ತದೆ. ಇಂಥ ಸಂದರ್ಭದಲ್ಲಿ ಮನೆ ಮದ್ದು ನಿಮ್ಮ ಸಮಸ್ಯೆಯನ್ನು ದೂರ ಮಾಡಬಲ್ಲದು.
ಗಂಟಲು ನೋವಿನಿಂದ ಬಳಲುತ್ತಿದ್ದರೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ಗಾರ್ಗಲ್ ಮಾಡಿ. ಇದು ಗಂಟಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದು ಹಾಕಿ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ನೋವು ಕಡಿಮೆಯಾಗುತ್ತದೆ.
ಗಂಟಲು ಸಮಸ್ಯೆಗೆ ಜೇಷ್ಠ ಮಧು ರಾಮಬಾಣ. ಇದ್ರ ಸೇವನೆ ಮಾಡುವುದ್ರಿಂದ ಗಂಟಲು ಒಣಗುವುದು, ನೋವು, ಉರಿ ಕಡಿಮೆಯಾಗುತ್ತದೆ.
ತುಳಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಗಂಟಲು ನೋಯುತ್ತಿದ್ದರೆ, ತುಳಸಿ ಎಲೆಗಳ ಕಷಾಯ ಮಾಡಿ ಮತ್ತು ಈ ಕಷಾಯದೊಂದಿಗೆ ಗಾರ್ಗಲ್ ಮಾಡಿ.
ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ರೆ ಅನೇಕ ಸಮಸ್ಯೆಗಳು ಕಾಡುತ್ತವೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಬಾರದು. ಹಾಗಾಗಿ ಆಗಾಗ ನೀರನ್ನು ಕುಡಿಯುತ್ತಿರಿ.
ಗಂಟಲು ನೋವಿನ ಸಮಸ್ಯೆಯಿರುವವರು ಜೇನು ತುಪ್ಪ ಸೇವನೆ ಮಾಡಬಹುದು. ಒಂದು ಚಮಚ ಜೇನುತುಪ್ಪವನ್ನು ಸೇವಿಸಿ. ತಕ್ಷಣ ನೀರು ಕುಡಿಯಬೇಡಿ.