ನಾಯಿ ಚರ್ಮದಲ್ಲಿರುವುದಕ್ಕಿಂತಲೂ ಜಾಸ್ತಿ ಬ್ಯಾಕ್ಟೀರಿಯಾ ಗಡ್ಡಧಾರಿಯಲ್ಲಿರುತ್ತದೆ ಎಂಬ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.
ಮನುಷ್ಯ ಹಾಗೂ ನಾಯಿಗೆ ಒಂದೇ ಎಂಆರ್ಐ ಮಷಿನ್ ಬಳಸಬಹುದಾ? ಇದರಿಂದ ನಾಯಿಗೆ ಸಂಬಂಧಿತ ಕಾಯಿಲೆಗಳು ಮನುಷ್ಯನಿಗೆ ಬರುತ್ತವೆಯೇ? ಎಂಬುದನ್ನು ತಿಳಿಯಲು ನಡೆಸಿದ ಅಧ್ಯಯನ ವೇಳೆ ಇದು ಗೊತ್ತಾಗಿದೆ.
ಇದಕ್ಕಾಗಿ 18 ಯುವಕರ ಗಡ್ಡದ ಭಾಗ ಹಾಗೂ 30 ನಾಯಿಗಳ ಕುತ್ತಿಗೆ ಭಾಗದ ಅಂಶವನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆಗ 23 ನಾಯಿ ಹಾಗೂ ಎಲ್ಲ 18 ಯುವಕರಲ್ಲಿ ಹೆಚ್ಚಿನ ಸೂಕ್ಷ್ಮಜೀವಿಗಳು ಇರುವುದು ಪತ್ತೆಯಾಗಿದ್ದು, ಗಡ್ಡಧಾರಿಗಳಿಗಿಂತ ನಾಯಿಗಳೇ ಕ್ಲೀನ್ ಎಂದು ಅಧ್ಯಯನಕಾರರು ಅಭಿಪ್ರಾಯ ಪಟ್ಟಿದ್ದಾರೆ.