ಕೆಲವೊಮ್ಮೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಚಾರ್ಜ್ ಆಗುವುದೇ ಇಲ್ಲ. ಚಾರ್ಜರ್ ಹಾಳಾಗಿದೆ ಇಲ್ಲ ಬ್ಯಾಟರಿ ಹೋಗಿದೆ ಅಂತಾ ತಿಳಿಯುವ ಬಳಕೆದಾರರು ಇದನ್ನು ರಿಪೇರಿಗೆ ಕೊಂಡೊಯ್ಯುತ್ತಾರೆ.
ಆದ್ರೆ ಅನೇಕ ಬಾರಿ ಬ್ಯಾಟರಿ ಅಥವಾ ನಿಮ್ಮ ಚಾರ್ಜರ್ ಹಾಳಾಗಿರುವುದಿಲ್ಲ. ಬೇರೆ ಕಾರಣ ಕೂಡ ಇರಬಹುದು. ಅದನ್ನು ಮನೆಯಲ್ಲಿಯೇ ಕುಳಿತು ಸರಿಪಡಿಸಬಹುದು.
ಹಾಗಾದ್ರೆ ಯಾವೆಲ್ಲ ಕಾರಣಗಳಿಂದ ಸ್ಮಾರ್ಟ್ ಫೋನ್ ಚಾರ್ಜ್ ಆಗುವುದಿಲ್ಲ ಎಂಬುವುದನ್ನು ನೋಡುವುದಾದ್ರೆ.
ಸ್ಮಾರ್ಟ್ ಫೋನ್ ಒದ್ದೆಯಾಗುವುದು ಒಂದು ಕಾರಣ. ನನ್ನ ಮೊಬೈಲ್ ನೀರಿಗೆ ಬಿದ್ದಿಲ್ಲ ಆದ್ರೂ ಚಾರ್ಜ್ ಆಗ್ತಿಲ್ಲ ಎನ್ನುವವರಿದ್ದಾರೆ. ನಿಮ್ಮ ಮೊಬೈಲ್ ನೀರಿಗೆ ಬೀಳಬೇಕೆಂದೇನೂ ಇಲ್ಲ. ನಿಮ್ಮ ಬೆವರು ಅಥವಾ ಕೈಗೆ ಇರುವ ನೀರು ಕೂಡ ಮೊಬೈಲ್ ಚಾರ್ಜ್ ಆಗದಿರಲು ಕಾರಣವಾಗುತ್ತದೆ. ಆಗ ಮೊಬೈಲ್ ಬ್ಯಾಟರಿ ತೆಗೆದು ಒಣಗಿದ ಬಟ್ಟೆಯಲ್ಲಿ ಕ್ಲೀನ್ ಮಾಡಿ ಮತ್ತೆ ಹಾಕಿ.
ಎಷ್ಟೇ ಗಮನ ಹರಿಸಿದ್ರೂ ಸ್ಮಾರ್ಟ್ ಫೋನ್ ಗೆ ಧೂಳು, ಮಣ್ಣು ತಗಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊದಲು ಸ್ಮಾರ್ಟ್ ಫೋನ್ ಚಾರ್ಜ್ ಮಾಡುವ ಜಾಗವನ್ನು ನೋಡಿ. ಅದನ್ನು ಹಗುರ ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ಚಾರ್ಜರ್ ಹಾಕಿ.
ಸರಿಯಾಗಿ ಓದದೇ ಅಪ್ ಡೇಟಿಂಗ್ ಸಂದೇಶವನ್ನು ಡಿಲಿಟ್ ಮಾಡಿ ಬಿಡ್ತೇವೆ. ಆದ್ರೆ ಅದ್ರಲ್ಲಿ ಬ್ಯಾಟರಿ ಅಪ್ ಡೇಟಿಂಗ್ ಸಂದೇಶ ಕೂಡ ಬಂದಿರುವ ಸಾಧ್ಯತೆಗಳಿರುತ್ತದೆ. ನವೀಕರಣ ಸಂದೇಶ ಬಂದಾಗ ಬ್ಯಾಟರಿಯನ್ನು ಅಪ್ ಡೇಟ್ ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಸ್ಮಾರ್ಟ್ ಫೋನ್ ಚಾರ್ಜ್ ಆಗುವುದಿಲ್ಲ.
ಸ್ಮಾರ್ಟ್ ಫೋನ್ ಚಾರ್ಜಿಂಗ್ ನಲ್ಲಿ ಯು.ಎಸ್.ಬಿ ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಬಹಳ ಹೊತ್ತಿನವರೆಗ ಫೋನ್ ಚಾರ್ಜ್ ಆಗಿಲ್ಲವೆಂದಾದ್ರೆ ಯು.ಎಸ್.ಬಿ ಸಮಸ್ಯೆ ಇದೆ ಎಂದರ್ಥ. ಹಾಗಾಗಿ ಯು.ಎಸ್.ಬಿ ಚೆಕ್ ಮಾಡಿ.