ಧಾರ್ಮಿಕ ಗ್ರಂಥಗಳ ಪ್ರಕಾರ ಕೆಲವೊಂದು ಕೆಲಸಗಳನ್ನು ಎಂದೂ ಮಾಡಬಾರದು. ಹಾಗೆ ಕೆಲವೊಂದು ಕೆಲಸಗಳನ್ನು ಅವಶ್ಯಕವಾಗಿ ಮಾಡಬೇಕು. ಕೆಲ ಕೆಲಸಗಳು, ಘಟನೆಗಳು ಅನಾದಿಕಾಲದಿಂದಲೂ ಅಶುಭ ಸಂಕೇತ ಎನ್ನಲಾಗಿದೆ.
ನಕಾರಾತ್ಮಕ ಪ್ರಭಾವ ಬೀರುತ್ತದೆ ಎನ್ನಲಾಗಿದೆ. ಹಾಗೆ ಕೆಲ ಕೆಲಸ, ಘಟನೆಗಳು ಅನಾದಿಕಾಲದಿಂದಲೂ ಶುಭ, ಮಂಗಳಕರ ಎನ್ನಲಾಗಿದೆ. ಪ್ರತಿಯೊಬ್ಬ ವ್ಯಕ್ತಿ ಈ ಎಲ್ಲದರ ಬಗ್ಗೆ ತಿಳಿದಿರಬೇಕು. ಯಾವುದು ಶುಭ, ಯಾವುದು ಅಶುಭ ಎಂಬುದು ಗೊತ್ತಿರಬೇಕು.
ಮನೆಯಲ್ಲಿರುವ ಕುರ್ಚಿ ಅಥವಾ ಸೋಪಾ ತಾನಾಗಿಯೇ ಮುರಿದ್ರೆ ಅದು ಅಶುಭ ಸಂಕೇತ. ಮುಂದಿನ ದಿನಗಳಲ್ಲಿ ಕಷ್ಟಗಳು ಎದುರಾಗಲಿದೆ ಎಂದರ್ಥ.
ಅಲಂಕಾರಗೊಂಡ ಮಹಿಳೆ ಕಣ್ಣ ಮುಂದೆ ಬಂದ್ರೆ ಅದು ಶುಭಕರವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಆದ್ರೆ ಸ್ವಪ್ನದಲ್ಲಿ ಕಾಣಬಾರದು ಎನ್ನಲಾಗಿದೆ.
ಡೋಲು ಬಾರಿಸುವಾಗ ಒಡಕು ಶಬ್ದ ಬಂದ್ರೆ ಅದನ್ನು ಅಪಶಕುನವೆಂದು ಪರಿಗಣಿಸಲಾಗಿದೆ.
ಮನೆಯಲ್ಲಿ ಇಲಿ, ಚಿಟ್ಟೆ, ಜೇನುನೊಣ, ಗೆದ್ದಲು, ಸೂಕ್ಷ್ಮ ಕೀಟಗಳು ಕಾಣಿಸಿಕೊಂಡ್ರೆ ಅಮಂಗಳಕರ. ಸಂಪತ್ತು ನಾಶದ ಸಂಕೇತವೆಂದು ಇದನ್ನು ನಂಬಲಾಗಿದೆ.
ಚಿನ್ನ, ಬೆಳ್ಳಿ ಆಭರಣ, ವಜ್ರದ ಆಭರಣವನ್ನು ಕಳೆದುಕೊಳ್ಳುವುದು ಅಶುಭ. ಕಳೆದ ವಸ್ತು ಮರಳಿ ಸಿಗದೆ ಹೋದಲ್ಲಿ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಎಂದರ್ಥೈಸಿಕೊಳ್ಳಿ.