ಮನೆಯ ಅಲಂಕಾರಕ್ಕಾಗಿ ತರಹೇವಾರಿ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸುವುದು ಈಗೀಗ ಒಂದು ಫ್ಯಾಷನ್ ಆಗಿದೆ. ಇದರಿಂದ ಮನೆಯೇನೋ ಚೆನ್ನಾಗಿ ಕಾಣುತ್ತೆ ನಿಜ. ಆದರೆ ಇದರಿಂದ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮ ಬೀರುತ್ತೆ ಗೊತ್ತಾ..?
ಹೌದು, ಮನೆಯ ಸೊಬಗನ್ನು ಹೆಚ್ಚಿಸುವ ಆರ್ಟಿಫಿಶಿಯಲ್ ಲೈಟ್ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ನೆದರ್ಲ್ಯಾಂಡಿನ ಲಿಡೆನ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಆರ್ಟಿಫಿಶಿಯಲ್ ಲೈಟ್ ನಿಂದ ಇಮ್ಯೂನ್ ಸಿಸ್ಟಮ್ ಸಂಬಂಧಿತ ರೋಗಗಳು, ಸ್ನಾಯು ನೋವು, ಮೂಳೆಗಳು ಟೊಳ್ಳಾಗುವಿಕೆ ಮುಂತಾದವುಗಳು ಹೆಚ್ಚುತ್ತವೆಯಂತೆ.
ಆರ್ಟಿಫಿಶಿಯಲ್ ಲೈಟ್ ಗಳನ್ನು ಪ್ರಾಣಿಗಳ ಮೇಲೆ ಪರೀಕ್ಷೆ ಮಾಡಿ ನೋಡಲಾಗಿದೆ. ನೈಸರ್ಗಿಕ ಬೆಳಕಿನಲ್ಲಿರುವ ಪ್ರಾಣಿಗಳನ್ನು ಆರ್ಟಿಫಿಶಿಯಲ್ ಬೆಳಕಿನಲ್ಲಿ ಕೆಲ ತಿಂಗಳ ಕಾಲ ಇಟ್ಟರೆ ಅವುಗಳ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.