ದೇಶದಲ್ಲಿ ಇತ್ತೀಚೆಗೆ ಆನ್ ಲೈನ್ ಹಾಗೂ ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಮ್ಮೆ ಹಣ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಅಸಾಧ್ಯ. ಹೀಗಾಗಿ ವಂಚನೆ ಪ್ರಕರಣಗಳ ಕುರಿತು ಬ್ಯಾಂಕ್ ಗ್ರಾಹಕರಿಗೆ ಅರಿವಿದ್ದರೆ ಉತ್ತಮ.
ನಿಮ್ಮ ಡಿವೈಸ್ ಗಳಲ್ಲಿ ಆಂಟಿವೈರಸ್ ಸ್ಕ್ಯಾನ್ ಚಾಲನೆಯಲ್ಲಿರಲಿ. ಬ್ರೌಸರ್ ವಿಳಾಸ ಪಟ್ಟಿಯಲ್ಲಿ ಯುಆರ್ಎಲ್ ಟೈಪ್ ಮಾಡಿ. ಸಾರ್ವಜನಿಕ ಡಿವೈಸ್, ಉಚಿತ ವೈಫೈ ಬಳಸಬೇಡಿ. ಇದನ್ನು ಬಳಸುವುದ್ರಿಂದ ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿರುತ್ತದೆ.
ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಆಗಾಗ ಬದಲಿಸುತ್ತಿರಿ. ಬ್ಯಾಂಕ್ ಖಾತೆ ಹಾಗೂ ನೆಟ್ ಬ್ಯಾಂಕಿಂಗ್ ಮಾಹಿತಿ ಫೋನ್ ನಲ್ಲಿ ಸೇವ್ ಮಾಡಬೇಡಿ. ಲಾಗಿನ್ ದಿನಾಂಕ ಹಾಗೂ ಸಮಯವನ್ನು ಪರೀಕ್ಷಿಸುತ್ತಿರಿ.
ನಿಮ್ಮ ಫೋನ್ ನಲ್ಲಿ ಬ್ಯಾಂಕ್ ಖಾತೆ, ಎಟಿಎಂ, ಪಾಸ್ವರ್ಡ್ ಫೋಟೋಗಳನ್ನು ಇಟ್ಟುಕೊಂಡಿದ್ದರೆ ಅದು ಸುಲಭವಾಗಿ ಸೋರಿಕೆಯಾಗುತ್ತದೆ.
ವಂಚನೆಯಿಂದ ತಪ್ಪಿಸಿಕೊಳ್ಳಬೇಕೆಂದ್ರೆ ಯಾವುದೇ ಫಿಶಿಂಗ್ ಇಮೇಲ್ ಮೇಲೆ ಕ್ಲಿಕ್ ಮಾಡಬೇಡಿ. ಆನ್ಲೈನ್ ವರ್ಗಾವಣೆ ವೇಳೆ ಒನ್ ಟೈಂ ಪಾಸ್ವರ್ಡ್ ವಿಧಾನ ಆಯ್ಕೆ ಮಾಡಿಕೊಳ್ಳಿ.