ನಿಮಗೆ ಉತ್ತಮ ಆರೋಗ್ಯ ಬೇಕಾ? ನಿಮ್ಮ ದೇಹದ ಜೊತೆಗೆ ಮೆದುಳು ಹಾಗು ಆತ್ಮ ಖುಷಿಯಾಗಿರಬೇಕಾ? ಹಾಗಾದ್ರೆ ಸ್ಪೂನ್ ನಲ್ಲಿ ತಿನ್ನುವುದಕ್ಕೆ ಗುಡ್ ಬೈ ಹೇಳಿ…..ಬದಲಿಗೆ ನಿಮ್ಮ ಕೈ ಬಳಸಿ ಹಾಗು ಆಹಾರ ಚೆನ್ನಾಗಿ ಕಲಿಸಿ ತಿನ್ನಿ, ಆರೋಗ್ಯ ವೃದ್ಧಿಯಾಗುತ್ತದೆ.
ಆಯುರ್ವೇದ ಗ್ರಂಥಗಳ ಪ್ರಕಾರ, ಪ್ರತಿ ಬೆರಳು ಕೂಡ ಐದು ಅಂಶಗಳ ಅರ್ಥ ಹೊಂದಿದೆ. ಹೆಬ್ಬೆರಳು – ಮಕ್ಕಳು ಹೆಬ್ಬೆರಳನ್ನು ಚೀಪುತ್ತವೆ. ಇದು ನೈಸರ್ಗಿಕ ಕ್ರಿಯೆಯಾಗಿದ್ದು, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.
ಮೊದಲ ಬೆರಳು ಗಾಳಿ, ಉಂಗುರದ ಬೆರಳು ಭೂಮಿ, ಮಧ್ಯ ಬೆರಳು ಬೆಂಕಿ ಮತ್ತು ಕೊನೆಯ ಬೆರಳು ನೀರು. ಅಂದ್ರೆ ಇದರ ಅರ್ಥ, ಈ ಯಾವುದೇ ಅಂಶಗಳ ಅಸಮತೋಲನ ಕಂಡು ಬಂದ್ರೆ, ವಾಸ್ತವವಾಗಿ ದೇಹದಲ್ಲಿ ಅನೇಕ ರೋಗ ಅಥವಾ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ನಾವು ನಮ್ಮ ಕೈಗಳಿಂದ ತಿನ್ನುವಾಗ ಬೆರಳುಗಳು ಮತ್ತು ಹೆಬ್ಬೆರಳು ಒಟ್ಟಿಗೆ ತಿನ್ನಲು ಒಟ್ಟಾಗಿ ಅಂಟಿಕೊಳ್ಳುತ್ತವೆ. ಆದ್ದರಿಂದ ನಮ್ಮ ದೇಹವನ್ನು ಸಮತೋಲನವಾಗಿಡಲು ಸಹಕರಿಸುತ್ತವೆ.