alex Certify ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಕಡಲೆಕಾಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಕಡಲೆಕಾಳು

ಕಡಲೆಯನ್ನು ಮೊಳಕೆ ರೂಪದಲ್ಲಾಗಿರಲಿ, ಬೇಯಿಸಿದ್ದಾಗಲಿ ಸೇವಿಸಿದರೆ ಅದರ ರುಚಿಯೇ ಬೇರೆ. ಇದನ್ನು ಪ್ರತಿದಿನ ಯಾವುದೋ ಒಂದು ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ.

* 100 ಗ್ರಾಂಗಳಷ್ಟು ಕಡಲೆಯಲ್ಲಿ ಹಿಟ್ಟಿನ ಪದಾರ್ಥ, ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಪೊಟಾಶಿಯಂ, ನಾರಿನಂಶ ಹೇರಳವಾಗಿ ಲಭ್ಯವಾಗುತ್ತದೆ. ಇದರಲ್ಲಿರುವ ಮ್ಯಾಂಗನೀಸ್, ಮ್ಯಾಗ್ನೀಷಿಯಂ ಶರೀರಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುವುದರಲ್ಲಿ ಸಹಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಪ್ರತಿದಿನ ಇದರಿಂದ ಮಾಡಿದ ಯಾವುದೋ ಒಂದು ಪದಾರ್ಥವನ್ನು ಸ್ನಾಕ್ಸ್ ರೂಪದಲ್ಲಿ ನೀಡುವುದು ಒಳ್ಳೆಯ ಅಂಶವಾಗಿದೆ.

* ಸಕ್ಕರೆ ಕಾಯಿಲೆ ಇರುವವರಿಗೆ ಕಡಲೆ ಹೆಚ್ಚು ಉಪಯುಕ್ತ. ಇವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ನಾರು ಜೀರ್ಣ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆಗಳು ಬಾಧಿಸದು.

* ಸಾಮಾನ್ಯವಾಗಿ ಮಹಿಳೆಯರು ಎದುರಿಸುವ ಸಮಸ್ಯೆಗಳಲ್ಲಿ ರಕ್ತಹೀನತೆ ಒಂದು. ಕಡಲೆಯಲ್ಲಿ ಕಬ್ಬಿಣದಂಶ ಹೇರಳವಾಗಿರುತ್ತದೆ. ಇದರ ಸೇವನೆಯಿಂದ ಶರೀರಕ್ಕೆ ಅಗತ್ಯವಾಗಿ ಬೇಕಾಗಿರುವಷ್ಟು ಕಬ್ಬಿಣ ಸಿಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳು ವೃದ್ಧಿಯಾಗುತ್ತವೆ.

* ರಕ್ತದೊತ್ತಡದಿಂದ ತೊಂದರೆ ಎದುರಿಸುತ್ತಿರುವವರಿಗೆ ಇದು ಉತ್ತಮ. ಆದ್ದರಿಂದ ಕಡಲೆಯಿಂದ ಮಾಡಿದ ಹುಳಿ, ಪಲ್ಯದಂತಹ ಪದಾರ್ಥಗಳನ್ನು ಸೇವಿಸುವುದು ಒಳಿತು.

* ಕಡಲೆಯನ್ನು ಪ್ರತಿನಿತ್ಯ ಸೇವಿಸಿದರೆ ಹೃದಯಕ್ಕೆ ರಕ್ತ ಸಕ್ರಮ ರೀತಿಯಲ್ಲಿ ಸರಬರಾಜಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಹೃದಯಕ್ಕೆ ಶಕ್ತಿ ನೀಡುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಯಾವುದೋ ಒಂದು ರೂಪದಲ್ಲಿ ಕಡಲೆಯನ್ನು ಸೇವಿಸುವುದು ಒಳ್ಳೆಯದು.

* ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರ. ಯಾಕೆಂದರೆ ಇದಕ್ಕೆ ಕೊಬ್ಬು ಕರಗಿಸುವ ಶಕ್ತಿ ಇದೆ. ಕಡಲೆಯಲ್ಲಿರುವ ಫೋಲೆಟ್ ಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...