ಯಥೇಚ್ಛವಾಗಿ ನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲೇಬೇಕು. ಕೆಲವರು ಈ ಸಮಯದಲ್ಲೂ ನೀರು ಕುಡಿಯುವುದಿಲ್ಲ. ಇದರಿಂದ ಅಪಾಯಗಳ ಸಾಧ್ಯತೆ ಹೆಚ್ಚು.
ಬೇಸಿಗೆಯಲ್ಲಿ ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ಶರೀರದ ಉಷ್ಣತೆ ಹೆಚ್ಚುತ್ತದೆ. ಬಾಯಿ, ಚರ್ಮ ಮತ್ತು ತುಟಿಗಳು ಒಣಗಿದಂತಿರುವುದು. ಮೂತ್ರವು ಮಂದವಾಗಿ ಹಾಗೂ ಹಳದಿ ಬಣ್ಣದಿಂದ ಕೂಡಿರುತ್ತದೆ. ಮೂತ್ರ ವಿಸರ್ಜನೆಯ ವೇಳೆ ಉರಿಯ ಅನುಭವ, ಬೆವರು ಮತ್ತು ಮೂತ್ರ ವಾಸನೆಯಿಂದ ಕೂಡಿರುವುದು, ಬಿಸಿಲಿಗೆ ಚರ್ಮ ಸುಡುವಂತಾಗುವುದು ಮತ್ತು ತಲೆನೋವು ಬರುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡು ಬಂದರೆ ನೀರು ಕುಡಿಯುವ ಪ್ರಮಾಣ ಹೆಚ್ಚಬೇಕು ಎಂದರ್ಥ.
ಬೇಸಿಗೆಯಲ್ಲಿ ನಾವು ದಿನಕ್ಕೆ ಎಷ್ಟು ನೀರನ್ನು ಕುಡಿಯಬೇಕೆಂದರೆ ದೇಹದಿಂದ ಎಷ್ಟು ನೀರು ಹೊರ ಹೋಗುತ್ತದೆಯೋ ಅಷ್ಟನ್ನು ತೆಗೆದುಕೊಳ್ಳಬೇಕು. ದೇಹವು ವಿಸರ್ಜನಾಂಗಗಳ ಮೂಲಕ ಬೇಡವಾದ ಪದಾರ್ಥಗಳನ್ನು ಹೊರಹಾಕಲು 2 ರಿಂದ 3 ಲೀಟರಿನಷ್ಟು ನೀರು ಬೇಕಾಗುತ್ತದೆ. ಈ ಕಾರಣದಿಂದ ಒಂದು ದಿನಕ್ಕೆ ನಾವು ಕನಿಷ್ಟ 2 ರಿಂದ 3 ಲೀಟರಿನಷ್ಟು ನೀರನ್ನು ಕುಡಿಯಬೇಕು.