ಮಕ್ಕಳು ಇಷ್ಟಪಟ್ಟು ಕುಲ್ಫಿ ತಿನ್ನುತ್ತಾರೆ. ಬಗೆ ಬಗೆಯ ಕುಲ್ಫಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಾಲಿನಿಂದ ರುಚಿಕರವಾದ ಕುಲ್ಫಿ ಮಾಡಿ ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು
ಹಾಲು 1/2 ಲೀಟರ್
ಸಕ್ಕರೆ 4 ಟೀ ಚಮಚ
ಡ್ರೈ ಫ್ರುಟ್ಸ್ ಪೌಡರ್ 4 ಚಮಚ
ಹಸಿರು ಏಲಕ್ಕಿ ಪುಡಿ 2 ಚಮಚ
ಮಾಡುವ ವಿಧಾನ
ಮೊದಲು ಹಾಲನ್ನು ಬಿಸಿ ಮಾಡಬೇಕು. ಹಾಲು ಕುದಿ ಬಂದ ನಂತರ ಅದಕ್ಕೆ 4 ಟೀ ಚಮಚ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.
ನಂತರ ಅದಕ್ಕೆ ಡ್ರೈ ಫ್ರುಟ್ಸ್ ಪೌಡರ್ ಮತ್ತು ಹಸಿರು ಏಲಕ್ಕಿ ಪುಡಿಯನ್ನು ಹಾಕಿ ಮತ್ತೆ ಕುದಿಸಬೇಕು. ಸ್ವಲ್ಪ ಹೊತ್ತು ಹಾಗೆ ಕುದಿಸಿದ ನಂತರ ಒಲೆಯಿಂದ ಇಳಿಸಬೇಕು.
ಹಾಲಿನ ಮಿಶ್ರಣವನ್ನು ಲೋಟಕ್ಕೆ ಸುರಿದು ಕಂಠಕ್ಕೆ ಮಾತ್ರ ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಬೇಕು. ಲೋಟದ ಮಧ್ಯದಲ್ಲಿ ಒಂದು ಕಡ್ಡಿಯನ್ನು ಚುಚ್ಚಿ ಫ್ರಿಡ್ಜ್ ನಲ್ಲಿ 8 ಗಂಟೆಗಳ ಕಾಲ ಇಡಬೇಕು.
ಈಗ ರುಚಿಕರವಾದ ಹಾಲಿನ ಕುಲ್ಫಿ ಸವಿಯಲು ಸಿದ್ಧ.