ಸುಡ ಸುಡು ಬಿಸಿಲಿನಲ್ಲಿ ದಾಹವಾದಾಗ ನಮಗೆಲ್ಲ ನೆನಪಾಗುವುದು ತಂಪು ಪಾನೀಯಗಳು. ಆದರೆ ತಂಪು ಪಾನೀಯಗಳಿಗಿಂತ ಮಜ್ಜಿಗೆ, ಎಳನೀರಿನಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳವೆ.
ಮಜ್ಜಿಗೆ ಎಲ್ಲಾ ರೀತಿಯ ರೋಗಗಳಿಗೆ ಉಪಯುಕ್ತವಾದ ಪೇಯವಾಗಿದೆ. ಅದರಲ್ಲೂ ಮಸಾಲಾ ಮಜ್ಜಿಗೆ ಟೇಸ್ಟಿ ಕೂಡ.
ಬೇಕಾಗುವ ಸಾಮಗ್ರಿಗಳು
ಗಟ್ಟಿ ಮೊಸರು 1 ಕಪ್
ಶುಂಠಿ ಒಂದಿಂಚು
ಹಸಿಮೆಣಸಿನ ಕಾಯಿ 1
ಜೀರಿಗೆ ಪುಡಿ 1/2 ಚಮಚ
ಇಂಗು 1/4 ಟೀ ಚಮಚ
ನಿಂಬೆರಸ 1 ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ನೀರು 1 ಕಪ್
ಸ್ವಲ್ಪ ಪುದೀನಾ
ಸ್ವಲ್ಪ ಕೊತ್ತಂಬರಿ ಸೊಪ್ಪು
ತುಪ್ಪ 1/2 ಟೀ ಚಮಚ
ಕರಿಬೇವು ಸ್ವಲ್ಪ.
ಮಾಡುವ ವಿಧಾನ
ಮೊದಲು ಮಿಕ್ಸಿ ಜಾರಿಗೆ ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ಮೊಸರು, ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಇಂಗು, ಉಪ್ಪು ಮತ್ತು ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ ಎಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಬಾಣಲೆಯಲ್ಲಿ 1/2 ಟೀ ಚಮಚ ತುಪ್ಪ, ಜೀರಿಗೆ ಮತ್ತು ಕರಬೇವಿನ ಎಲೆಯನ್ನು ಹಾಕಿ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಈ ಒಗ್ಗರಣೆಯನ್ನು ರುಬ್ಬಿಕೊಂಡ ಮಜ್ಜಿಗೆಗೆ ಹಾಕಬೇಕು. ನಂತರ ನಿಂಬೆರಸವನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಒಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹೀಗೆ ಮಾಡಿದರೆ ಮಸಾಲಾ ಮಜ್ಜಿಗೆ ಸವಿಯಲು ಸಿದ್ಧ.