ನಾವು ದಿನವೂ ಬಳಸುವ ಮೊಬೈಲ್ ಅನ್ನು ಯಾವ ರಾಸಾಯನಿಕಗಳಿಂದ ಮಾಡಿರುತ್ತಾರೆ ಎಂದು ಯಾವಾಗಲಾದರೂ ಯೋಚಿಸಿದ್ದೀರಾ…?
ಅದನ್ನು ಬ್ರಿಟನ್ನ ಪ್ಲೈಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು ಮೊಬೈಲ್ ಗಳನ್ನು ಶಕ್ತಿಶಾಲಿಯಾದ ಬ್ಲೆಂಡರ್ಗಳಲ್ಲಿ ಪುಡಿ ಮಾಡಿ ಪ್ರಯೋಗ ನಡೆಸಿದ್ದಾರೆ.
ಹೀಗೆ ಪುಡಿ ಮಾಡಿದ ಮೊಬೈಲ್ ಗಳ ಮೇಲೆ ವಿವಿಧ ಪ್ರಯೋಗ ನಡೆಸಿದ ಮೇಲೆ ಕಂಡು ಹಿಡಿದಿದ್ದೇನೆಂದರೆ, ಮೊಬೈಲ್ಗಳಲ್ಲಿ 33 ಗ್ರಾಂ ಕಬ್ಬಿಣ, 13 ಗ್ರಾಂ ಸಿಲಿಕಾನ್, 7 ಗ್ರಾಂ ಕ್ರೊಮಿಯಮ್, 90ಮಿ.ಗ್ರಾಂ ಬೆಳ್ಳಿ, 36 ಮಿ.ಗ್ರಾಂ ಚಿನ್ನ, 900 ಮಿ.ಗ್ರಾಂ ಟಂಗ್ಸಟನ್, 70ಮಿ.ಗ್ರಾಂ ಕೊಬಾಲ್ಟ್ ಹಾಗೂ ಮೊಲಿಬ್ಡಿನಿಯಮ್. ಇಂಥ ರಾಸಾಯನಿಕ ಪಧಾರ್ಥಗಳು ಸಿಕ್ಕಿವೆ.
ಈ ಪ್ರಯೋಗ ನಡೆಸಿದ್ದಕ್ಕೆ ವಿಜ್ಞಾನಿಗಳು ನೀಡಿದ ಕಾರಣವೇನೆಂದರೆ, ಮೊಬೈಲ್ಗಳಲ್ಲಿ ಬಳಸುವ ಕೆಲ ಧಾತುಗಳು ಬಹಳ ಕಡಿಮೆ ಸಿಗುತ್ತವೆ. ಅವುಗಳನ್ನು ಆಫ್ರಿಕಾದ ಗಣಿಯಿಂದ ಅಕ್ರಮವಾಗಿ ತೆಗೆಯುತ್ತಿದ್ದು ಪರಿಸರಕ್ಕೆ ಅವುಗಳಿಂದ ಹಾನಿಯಾಗುತ್ತಿದೆ. ಆದ್ದರಿಂದ ಈ ಥರ ಧಾತುಗಳನ್ನು ನೋಡಿದರೆ ಅವುಗಳ ಬಗ್ಗೆ ಜಾಗೃತಿ ಮೂಡಿ ಇದನ್ನ ತಡೆಯಬಹುದು ಎಂದು ವಿಜ್ಞಾನಿಗಳು ಆಶಿಸುತ್ತಿದ್ದಾರೆ.