ಮನುಷ್ಯನ ಹುಟ್ಟು- ಸಾವು ನಿಶ್ಚಯವಾಗಿರುತ್ತದೆ. ಆದ್ರೆ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತನ್ನ ಕರ್ಮಗಳಿಂದಾಗಿ ಆಯಸ್ಸನ್ನು ಹೆಚ್ಚು ಹಾಗೂ ಕಡಿಮೆ ಮಾಡಿಕೊಳ್ಳಬಹುದು. ಕೆಲವು ಕೆಲಸಗಳನ್ನು ಮಾಡಿದ್ರೆ ಆಯಸ್ಸು ಕಡಿಮೆಯಾಗುತ್ತೆ ಎಂದು ಶಾಸ್ತ್ರ ಹೇಳುತ್ತೆ.
ಶಾಸ್ತ್ರಗಳ ಪ್ರಕಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಯಮ, ನಮ್ಮ ಆಯಸ್ಸು ಮುಗಿಯುವ ಮುನ್ನವೇ ನಮ್ಮನ್ನು ಕರೆದೊಯ್ಯುತ್ತಾನಂತೆ. ಹಾಗಾಗಿ ಆ ಕೆಲಸಗಳನ್ನು ಮಾಡದಿರುವುದೇ ಲೇಸು.
ಮಹಾಭಾರತದ ಪ್ರಕಾರ ತಿನ್ನುವ ವೇಳೆ ಓದಬಾರದು. ಹಾಗೆ ಮಾಡಿದ್ರೆ ಯಮರಾಜ ಆಯಸ್ಸನ್ನು ಕಡಿಮೆ ಮಾಡುತ್ತಾನಂತೆ. ಹಾಗಾಗಿ ಯಾವುದೇ ಕಾರಣಕ್ಕೂ ತಿನ್ನುವಾಗ ಪುಸ್ತಕ ಮುಟ್ಟಬೇಡಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಕಾಲು ಹಾಕಿ ಮಲಗಬಾರದು. ಇದರಿಂದ ಆಯಸ್ಸು ಕಡಿಮೆಯಾಗುತ್ತದೆ.
ಸೂರ್ಯೋದಯ ಹಾಗೂ ಸೂರ್ಯಸ್ತದ ವೇಳೆ ಮಲಗಿದ್ದರೆ ರೋಗಕ್ಕೆ ಆಹ್ವಾನ ನೀಡಿದಂತೆ. ರೋಗ ಬಂದು ನಮ್ಮ ಆಯಸ್ಸು ಕಡಿಮೆಯಾಗುತ್ತದೆ.
ಮಹಾಭಾರತದ ಪ್ರಕಾರ ಮಂಗಳವಾರ ಹಾಗೂ ಶನಿವಾರ ಕ್ಷೌರ ಮಾಡಿಸಿದರೂ ಆಯಸ್ಸು ಕಡಿಮೆಯಾಗುತ್ತದೆ.
ಹಗಲಿನಲ್ಲಿ ಮಹಿಳೆ, ಪುರುಷ ಒಂದಾದ್ರೆ ಕೂಡ ಆಯಸ್ಸು ಕಡಿಮೆಯಾಗುತ್ತೆ.