ಜನವರಿಯಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ನಿಮ್ಮ ಗೆಳೆಯರು, ನೆಂಟರು ಯಾರಾದರೂ ಈ ತಿಂಗಳಲ್ಲಿ ಹುಟ್ಟಿದ್ದರೆ, ಅವರ ಗುಣಗಳು ಹೀಗಿರುತ್ತದೆ.
– ನೈಸರ್ಗಿಕವಾಗಿ ಹಾಸ್ಯ ಪ್ರಜ್ಞೆ ಹೊಂದಿರುತ್ತಾರೆ. ದಿನಪೂರ್ತಿ ಲವಲವಿಕೆಯಿಂದ ಕೂಡಿರುತ್ತಾರೆ. ಬೇರೆಯವರನ್ನು ಖುಷಿ ಪಡಿಸುತ್ತಾರೆ.
– ಗಮನಿಸುವ ಶಕ್ತಿ ಅಪಾರ. ಸಾಹಸ ಮನೋಭಾವ. ಉತ್ತಮ ಮಾತುಗಾರಿಕೆ.
– ಸ್ವತಂತ್ರ ಮನೋಭಾವ ಹೊಂದಿರುತ್ತಾರೆ. ಬೇರೆಯವರ ಬಗ್ಗೆ ಆಡಿಕೊಳ್ಳಲು ಇವರು ಬಯಸುವುದಿಲ್ಲ.
– ಈ ತಿಂಗಳಲ್ಲಿ ಹುಟ್ಟಿದ ಬಹುತೇಕರು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರುತ್ತಾರೆ. ಆಕರ್ಷಣೆಯ ಕೇಂದ್ರ ಬಿಂದು ಇವರು. ಸಂಗೀತ ಹಾಗೂ ನೃತ್ಯದ ಕಡೆ ಒಲವು.
– ಈ ತಿಂಗಳಲ್ಲಿ ಜನಿಸಿದವರು ನೇರ ವ್ಯಕ್ತಿತ್ವ ಹೊಂದಿರುತ್ತಾರೆ. ಜೀವನದ ಬಗ್ಗೆ ಸ್ಪಷ್ಟ ದೃಷ್ಟಿಕೋನ ಹೊಂದಿರುತ್ತಾರೆ.