ಹಿಂದೂ ಧರ್ಮದಲ್ಲಿ ದೇವರ ಪೂಜೆ ವೇಳೆ ತೆಂಗಿನ ಕಾಯಿ ಒಡೆಯುವ ಪದ್ಧತಿಯಿದೆ. ಅನೇಕ ಬಾರಿ ಒಡೆದ ತೆಂಗಿನಕಾಯಿ ಹಾಳಾಗಿರುತ್ತದೆ. ಪೂಜೆ ನಂತ್ರ ಹಾಳಾದ ತೆಂಗಿನಕಾಯಿ ನೀಡಿದ ಅಂಗಡಿ ಮಾಲೀಕನಿಗೆ ಕೆಲವರು ಬೈದ್ರೆ ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ತೆಂಗಿನಕಾಯಿ ಹಾಳಾಗಲು ಕಾರಣವೇನು? ಇದು ಅಶುಭ ಫಲ ನೀಡುತ್ತಾ? ಇದು ಮುಂದೆ ಬರಲಿರುವ ಕಷ್ಟದ ಮುನ್ಸೂಚನೆಯಾ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ.
ನಿಮಗೂ ಈ ಸಮಸ್ಯೆ ಕಾಡಿದ್ದರೆ ಅವಶ್ಯವಾಗಿ ಈ ಸುದ್ದಿ ಓದಿ. ಪೂಜೆ ವೇಳೆ ಒಡೆದ ತೆಂಗಿನಕಾಯಿ ಹಾಳಾಗಿದ್ರೆ ಎಲ್ಲ ಬಾರಿ ಇದು ಅಶುಭ ಸಂಕೇತವಲ್ಲ. ತೆಂಗಿನಕಾಯಿಯನ್ನು ತಾಯಿ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಲಕ್ಷ್ಮಿ ಆರಾಧನೆ ವೇಳೆ ತೆಂಗಿನಕಾಯಿ ಒಡೆಯಲಾಗುತ್ತದೆ. ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಇದನ್ನು ಶುಭ ಸಂಕೇತ ಎನ್ನಲಾಗುತ್ತದೆ.
ಒಡೆದ ತೆಂಗಿನಕಾಯಿ ಹಾಳಾಗಿದ್ದು, ಅದನ್ನು ಶುಭವೆನ್ನಲು ವಿಶೇಷ ಕಾರಣವಿದೆ. ದೇವರಿಗೆ ನೀವು ಅರ್ಪಣೆ ಮಾಡಿದ ತೆಂಗಿನಕಾಯಿಯನ್ನು ದೇವರು ಸ್ವೀಕರಿಸಿದ್ದಾನೆ. ನಿಮ್ಮ ಪೂಜೆಗೆ ತೃಪ್ತಿಗೊಂಡಿದ್ದಾನೆ. ಶೀಘ್ರವೇ ನಿಮ್ಮೆಲ್ಲ ಆಸೆ ಈಡೇರಲಿದೆ ಎಂದರ್ಥ. ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಮಾಡಿ ತೆಂಗಿನಕಾಯಿ ಒಡೆದಾಗ ತೆಂಗಿನಕಾಯಿ ಹಾಳಾಗಿದ್ದರೆ ನಿಮ್ಮ ಪ್ರಾರ್ಥನೆ ದೇವರಿಗೆ ಕೇಳಿದೆ ಎಂದು ಅರ್ಥೈಸಿಕೊಳ್ಳಿ.