ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ. ಚಲಾವಣೆಯಲ್ಲಿರುವ 1, 2, 5 ಹಾಗೂ 10 ರೂ. ನಾಣ್ಯ ತಯಾರಿಕೆಗೆ ವೆಚ್ಚವಾಗುತ್ತಿರುವ ಮಾಹಿತಿ ಇಲ್ಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮಾಹಿತಿ ನೀಡಿದ್ದು, ಒಂದು ರೂಪಾಯಿ ನಾಣ್ಯವನ್ನು ಟಂಕಿಸಲು 1.11 ರೂಪಾಯಿ ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ.
ಭಾರತದಲ್ಲಿ ಮುಗಿಲು ಮುಟ್ಟಿದ ಪೆಟ್ರೋಲ್ – ಡಿಸೇಲ್ ಬೆಲೆ: ದರ ಕಡಿಮೆಯಿರುವ ನೇಪಾಳದಿಂದ ಕಳ್ಳಸಾಗಣೆ
ಅದೇ ರೀತಿ 2 ರೂ. ನಾಣ್ಯ ಟಂಕಿಸಲು 1.28 ರೂಪಾಯಿ, 5 ರೂ ನಾಣ್ಯಕ್ಕೆ 3.69 ರೂಪಾಯಿ ಹಾಗೂ 10 ರೂ. ನಾಣ್ಯಕ್ಕೆ 5.54 ರೂಪಾಯಿ ವೆಚ್ಚ ತಗಲುತ್ತದೆ ಎಂದು ಮಾಹಿತಿ ನೀಡಲಾಗಿದೆ.