ಒಂದಿಷ್ಟು ಭೂಮಿ, ಸುಂದರ ಮನೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ತಮ್ಮದೆ ಭೂಮಿಯಲ್ಲಿ ಮನೆ ಕಟ್ಟಿ ಚೆಂದದ ಸಂಸಾರ ನಡೆಸಬೇಕೆಂಬುದು ಎಲ್ಲರ ಆಸೆ. ಆದ್ರೆ ಭೂಮಿ ಮೇಲೆ ಕಾಲಿಡದೆ ಸಮುದ್ರದಲ್ಲೇ ಜೀವನ ಕಳೆಯುವ ಜನರು ನಮ್ಮಲ್ಲಿದ್ದಾರೆ ಅಂದ್ರೆ ನೀವು ನಂಬಲೇಬೇಕು.
ಹೌದು, ಸಮಾ ಬಜಾವೂ ಜನಾಂಗದ ಜನರು ಭೂಮಿ ಮೇಲೆ ಕಾಲಿಡುವುದಿಲ್ಲ. ಪ್ರೀತಿ ಪಾತ್ರರು ಸಾವನ್ನಪ್ಪಿದಾಗ ಹೂಳಲು ಮಾತ್ರ ಅವ್ರು ಭೂಮಿ ಮೇಲೆ ಕಾಲಿಡ್ತಾರೆ. ಸಮಾ ಬಜಾವೂ ಜನಾಂಗದವರ ವಾಸ ಸಮುದ್ರದಲ್ಲಿ. ಸಮುದ್ರದಲ್ಲಿಯೇ ಮನೆ ನಿರ್ಮಿಸಿಕೊಂಡು ಅಲ್ಲಿಯೇ ಬದುಕು ನಡೆಸುತ್ತಾರೆ.
ವಿಶ್ವದ ಅತ್ಯುತ್ತಮ ಏರ್ ಪೋರ್ಟ್ಸ್ ನೋಡಬೇಕಾ….? ಜಸ್ಟ್ ಇಲ್ಲಿ ಕ್ಲಿಕ್ ಮಾಡಿ
ಸಮುದ್ರದ ತರಕಾರಿ ಹಾಗೂ ಮೀನು ಹಿಡಿಯುವುದು ಇವ್ರ ಕಸುಬು. ಹಾಗಾಗಿ ಒಂದು ಕಡೆ ಈ ಜನಾಂಗದವರು ನೆಲೆ ನಿಲ್ಲುವುದಿಲ್ಲ. ಸ್ಥಳ ಬದಲಿಸುವ ಇವರಿಗೆ ಮೀನು ಹಿಡಿಯಲು ಯಾವುದೇ ವಸ್ತು ಬೇಕಾಗಿಲ್ಲ. ಕೈನಲ್ಲಿಯೇ ಮೀನು ಹಿಡಿಯುವುದು ಇವ್ರ ಕಲೆ. ಈ ಜನಾಂಗದ ಜನರು ಫಿಲಿಫೈನ್ಸ್, ಮಲೇಷಿಯಾ ಮತ್ತು ಇಂಡೋನೇಷ್ಯಾದ ಕೆಲ ಪ್ರದೇಶಗಳಲ್ಲಿ ವಾಸವಾಗಿದ್ದಾರೆ.