ಬೇಸ್ಮೆಂಟ್ ಅಥವಾ ಅಂಡರ್ ಗ್ರೌಂಡ್ ಮನೆಗಳ ಬಗ್ಗೆ ಕೇಳಿರ್ತಿರಾ. ಆದ್ರೆ ಅಂಡರ್ ಗ್ರೌಂಡ್ ಗ್ರಾಮದ ಬಗ್ಗೆ ಕೇಳಿದ್ದೀರಾ..? ಆಶ್ಚರ್ಯ ಪಡಬೇಡಿ. ವಿಶ್ವದಲ್ಲಿ ಇಂತಹದ್ದೂ ಒಂದು ಗ್ರಾಮವಿದೆ. ಆ ಊರಿನ ಜನರೆಲ್ಲ ನೆಲದ ಕೆಳಗೆ ವಾಸಿಸುತ್ತಾರೆ.
ಇಂತಹದ್ದೊಂದು ಗ್ರಾಮ ದಕ್ಷಿಣ ಆಸ್ಟ್ರೇಲಿಯಾದಲ್ಲಿದೆ. ಆ ಗ್ರಾಮದ ಹೆಸರು Coober Pedy. ಜನರು ಕ್ಷೀರಸ್ಫಟಿಕ ಗಣಿಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಮೇಲಿನಿಂದ ನೋಡಲು ಈ ಮನೆಗಳು ಮಣ್ಣಿನಂತೆ ಕಾಣುತ್ತವೆ. ಒಳ ಹೊಕ್ಕರೆ ಅಲ್ಲಿನ ಅಲಂಕಾರ ರಚನೆ ಯಾವುದೇ ಮಹಲ್ ಗಿಂತ ಕಡಿಮೆ ಇಲ್ಲ. ವರದಿ ಪ್ರಕಾರ ಅಲ್ಲಿನ ಶೇಕಡಾ 60 ರಷ್ಟು ಮಂದಿ ಅಂಡರ್ ಗ್ರೌಂಡ್ ನಲ್ಲಿ ನೆಲೆಸುತ್ತಾರಂತೆ. ಇದನ್ನು ‘Opal capital of the world ಎಂದು ಕರೆಯಲಾಗುತ್ತದೆ.
ಕ್ಷೀರಸ್ಫಟಿಕ ಜಗತ್ತಿನ ಒಂದು ಅತ್ಯಮೂಲ್ಯ ಕಲ್ಲು. Coober Pedy ಒಂದು ಮರಭೂಮಿ. ಬೇಸಿಗೆಯಲ್ಲಿ ಅತಿ ಸೆಕೆ ಇದ್ದರೆ ಚಳಿಗಾಲದಲ್ಲಿ ತಾಪಮಾನ ತುಂಬಾ ಕಡಿಮೆಯಿರುತ್ತದೆ. 1915ರಲ್ಲಿ ಇಲ್ಲಿ ಗಣಿಗಾರಿಕೆ ಶುರುವಾಗಿತ್ತು. ಆಗ ಅಲ್ಲಿನ ಜನರು ಬಹಳಷ್ಟು ಕಷ್ಟಗಳನ್ನು ಎದುರಿಸಿದ್ರು. ಗಣಿಗಾರಿಕೆ ನಿಂತ ನಂತ್ರ ಅದೇ ಪ್ರದೇಶದಲ್ಲಿ ಆಶ್ರಯ ಪಡೆಯಲು ಶುರುಮಾಡಿದ್ರು.
ಗಣಿಯಲ್ಲಿ ನಿರ್ಮಾಣವಾಗಿರುವ ಮನೆಗಳು ಮನಸ್ಸಿಗೆ ಮುದ ನೀಡುತ್ತವೆ. ಅಲ್ಲಿನ ವಾತಾವರಣ ಹಿತವಾಗಿದೆ. ಬೇಸಿಗೆಯಲ್ಲಿ ಎಸಿಯಾಗ್ಲಿ, ಚಳಿಗಾಲದಲ್ಲಿ ಹೀಟರ್ ಅವಶ್ಯಕತೆಯಾಗ್ಲಿ ಅಲ್ಲಿನವರಿಗಿಲ್ಲ. ಅನೇಕ ಹಾಲಿವುಡ್ ಚಿತ್ರಗಳ ಶೂಟಿಂಗ್ ಇಲ್ಲಿ ನಡೆದಿದೆ.