ಬೇಕಾಗುವ ಪದಾರ್ಥಗಳು:
ಹಾಲು 1 ಲೀ, ಸಕ್ಕರೆ, ಅರಿಶಿನ ಪುಡಿ, ಏಲಕ್ಕಿ ಪುಡಿ, ವಿನೆಗರ್, ಬಾದಾಮಿ, ಪಿಸ್ತಾ.
ಮಾಡುವ ವಿಧಾನ:
ಮೊದಲು 1 ಲೀ ಹಾಲನ್ನು ಚೆನ್ನಾಗಿ ದಪ್ಪಗಾಗುವವರೆಗೂ ಕುದಿಸಿ, ನಂತರ ಅದಕ್ಕೆ ಸ್ವಲ್ಪ ವಿನೆಗರ್ ಸೇರಿಸಿ. ಸ್ವಲ್ಪ ಸಮಯದ ನಂತರ ಹಾಲು ಒಡೆದು ಕೊಬ್ಬಿನಂಶ ಮತ್ತು ನೀರಿನಂಶ ಬೇರೆ ಬೇರೆಯಾಗುತ್ತದೆ, ನಂತರ ಅದನ್ನು ಒಂದು ಮಸ್ಲಿಮ್ ಬಟ್ಟೆಯಿಂದ ಸೋಸಿ ನೀರಿನ ಅಂಶ ತೆಗೆಯಿರಿ.
ಬಟ್ಟೆಯನ್ನು ಬೇರೆ ನೀರಿನಿಂದ ತೊಳೆದು ಸ್ವಲ್ಪ ಸಮಯ ಹಾಗೇ ಬಿಡಿ. ನಂತರ ಅದನ್ನು ಕೈಯಿಂದ ಮೆದು ಆಗುವವರೆಗೂ ಕಲೆಸಿ. ಅದಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಕಲೆಸಿ. ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಕುಕ್ಕರ್ ನಲ್ಲಿ ನೀರು ಕುದಿಸಿ, ಸಕ್ಕರೆ ಸೇರಿಸಿ.
ಅದಕ್ಕೆ ಈ ಉಂಡೆಗಳನ್ನು ಹಾಕಿ 1 ವಿಷಲ್ ಕೂಗಿದ ಬಳಿಕ ಬಿಸಿಯಾದ ಹಾಲಿಗೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ. ಕೇಸರಿ ದಳಗಳನ್ನು ಕುಟ್ಟಿ ಪುಡಿ ಮಾಡಿ ಹಾಲಿಗೆ ಸೇರಿಸಿ. ಬೆಂದ ಉಂಡೆಗಳನ್ನು ಈ ಹಾಲಿಗೆ ಸೇರಿಸಿ ಜೊತೆಗೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹಾಕಿ ಅಲಂಕರಿಸಿ.