ಪ್ರತಿಯೊಬ್ಬರಿಗೂ ಈಗ ಅಲೋವೆರಾ ಬಗ್ಗೆ ಗೊತ್ತು. ಅಲೋವೆರಾವನ್ನು ಔಷಧಿಯಾಗಿ ಬಳಸಲಾಗ್ತಿದೆ. ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡ್ತಿವೆ. ದೇಶದಲ್ಲಿ ಅಲೋವೆರಾಕ್ಕೆ ಬೇಡಿಕೆ ಹೆಚ್ಚಿದೆ.
ಈ ಅಲೋವೆರಾದಿಂದ ನೀವೂ ಹಣ ಗಳಿಕೆ ಮಾಡಬಹುದು. ಎರಡು ರೀತಿಯಲ್ಲಿ ಅಲೋವೆರಾ ಬ್ಯುಸಿನೆಸ್ ಶುರು ಮಾಡಬಹುದು. ಒಂದು ಅಲೋವೆರಾ ಬೆಳೆದು ಅದನ್ನು ಮಾರಾಟ ಮಾಡಿ ವಾರ್ಷಿಕ ಗಳಿಕೆ ಮಾಡಬಹುದು. ಇನ್ನೊಂದು ಅಲೋವೆರಾ ಪ್ರೊಸೆಸಿಂಗ್ ಯುನಿಟ್ ಹಾಕಿಕೊಂಡು ಜ್ಯೂಸ್ ಮಾಡಿ ಮಾರಾಟ ಮಾಡಬಹುದು.
ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆದು ಮೂರು ವರ್ಷಗಳ ಕಾಲ ಫಲ ಪಡೆಯಬಹುದಾಗಿದೆ. ಈಗ IC 111271, IC111269 ಮತ್ತು AL-1 ಹೈರೋಯಿಡ್ ಜಾತಿಯ ಅಲೋವೆರಾವನ್ನು ಎಲ್ಲಿ ಬೇಕಾದ್ರೂ ಬೆಳೆಯಬಹುದಾಗಿದೆ.
ಒಂದು ಹೆಕ್ಟೇರ್ ಪ್ರದೇಶದಲ್ಲಿ 40-45 ಟನ್ ಅಲೋವೆರಾ ಎಲೆಗಳನ್ನು ಒಂದು ವರ್ಷದಲ್ಲಿ ಬೆಳೆಯಬಹುದು. ಬೇರೆ ಬೇರೆ ಕಡೆ ಅಲೋವೆರಾ ಎಲೆಗೆ ಬೇರೆ ಬೇರೆ ದರವಿದೆ. ಇನ್ನು 2-3 ವರ್ಷದಲ್ಲಿ ಬೆಳೆ ಹೆಚ್ಚಿರುತ್ತದೆ. ಐದನೇ ವರ್ಷದಲ್ಲಿ ಬೆಳೆ ಪ್ರಮಾಣ ಕಡಿಮೆಯಾಗುತ್ತದೆ.