ವಿವಾಹದ ಬಳಿಕ ಬಹಳಷ್ಟು ದಂಪತಿಗಳು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯೊಂದಿಗೆ ಸಮರ್ಪಕವಾಗಿ ಸೇರಲು ವಿಫಲರಾಗುತ್ತಾರೆಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದು, ಇವುಗಳಿಂದ ಹೊರ ಬಂದರೆ ದಾಂಪತ್ಯ ಆನಂದಕರವಾಗುತ್ತದೆಂದು ಹೇಳುತ್ತಾರೆ.
ಭಾರತದಲ್ಲಿ ಲೈಂಗಿಕತೆ ಕುರಿತು ಇನ್ನೂ ಮಡಿವಂತಿಕೆಯಿರುವ ಕಾರಣ ಅರ್ಧಂಬರ್ಧ ವಿಚಾರಗಳನ್ನು ತಲೆಗೆ ತುಂಬಿಸಿಕೊಂಡವರು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯನ್ನು ಕೂಡಲು ವಿಫಲರಾಗುತ್ತಾರೆ ಎನ್ನಲಾಗಿದೆ. ಅಲ್ಲದೇ ‘ಮೊದಲ ರಾತ್ರಿ’ ಯ ತಮ್ಮ ತಪ್ಪು ನಡೆ ಎಲ್ಲಿ ಮುಜುಗರಕ್ಕೀಡು ಮಾಡುತ್ತದೋ ಎಂಬ ಆತಂಕವೂ ವಿಫಲತೆಗೆ ಮತ್ತೊಂದು ಕಾರಣವಾಗುತ್ತದೆನ್ನಲಾಗಿದೆ.
ವಿವಾಹ ಸಮಾರಂಭದಲ್ಲಿ ಸುಸ್ತಾಗಿರುವ ದಂಪತಿಗಳು ‘ಮೊದಲ ರಾತ್ರಿ’ ಗೆ ಪೂರ್ಣವಾಗಿ ಸಜ್ಜಾಗದಿರುವುದು, ಮದುವೆಗೆ ಮುಂಚೆ ಸಂಗಾತಿಗಳು ಪರಸ್ಪರ ಅರ್ಥೈಸಿಕೊಳ್ಳದಿರುವುದು ಇವೆಲ್ಲವೂ ವಿಫಲರಾಗಲು ಪ್ರಮುಖ ಕಾರಣವೆಂದು ತಜ್ಞರು ತಿಳಿಸುತ್ತಾರೆ. ಕೆಲ ದಂಪತಿಗಳು ವಿವಾಹವಾಗಿ ವರ್ಷಗಳೇ ಕಳೆದರೂ ತಮ್ಮ ಸಂಗಾತಿಯೊಂದಿಗೆ ಸೇರದಿರುವ ಅಚ್ಚರಿಯ ಸಂಗತಿಗಳೂ ಬೆಳಕಿಗೆ ಬಂದಿವೆ. ಲೈಂಗಿಕತೆ ಕುರಿತು ಯಾವುದೇ ಮಡಿವಂತಿಕೆ ತೋರದೆ ತಮ್ಮ ಪತಿ ಅಥವಾ ಪತ್ನಿಯ ಜೊತೆ ಮುಕ್ತವಾಗಿ ಮಾತನಾಡಿ ಈ ಸಮಸ್ಯೆಯಿಂದ ಹೊರ ಬರಬಹುದೆಂದು ತಜ್ಞರು ತಿಳಿಸುತ್ತಾರೆ.