ಶ್ರಾವಣದ ಬಳಿಕ ಹಬ್ಬಗಳ ಸಾಲು ಆರಂಭವಾಗಿದ್ದು, ಮುಂಬರುವ ದಿನಗಳು ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಸೂಕ್ತವಾಗಿದೆ. ಆದರೆ ಈಗ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ.
ಆದರೂ ಕೂಡಾ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವುದು ಸಂಪ್ರದಾಯವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಚಿನ್ನ ಖರೀದಿಯೂ ಹೆಚ್ಚಾಗಲಿದ್ದು, ಆದರೆ ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರವಾಗಿ ಏರುತ್ತಿರುವುದು ಖರೀದಿದಾರರನ್ನು ಚಿಂತೆಗೀಡು ಮಾಡಿದೆ.
ದೆಹಲಿಯಲ್ಲಿ ಮಂಗಳವಾರ 10 ಗ್ರಾಂ ಶುದ್ಧ ಚಿನ್ನದ ದರ 520 ರೂಪಾಯಿ ಏರಿಕೆಯಾಗಿದ್ದು 54,050 ರೂಪಾಯಿಗೆ ತಲುಪಿದೆ. ಆಭರಣ ಚಿನ್ನದ ದರ 49,550 ರೂ. ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರ ಖರೀದಿಯಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.