ಒಮ್ಮೆ ಲಾಟರಿ ಗೆಲ್ಲಬೇಕೆಂಬುದು ಎಲ್ಲರ ಬಯಕೆ. ಆದ್ರೆ ರೊಮೇನಿಯಾದ ವ್ಯಕ್ತಿಯೊಬ್ಬನಿಗೆ ಲಾಟರಿ ಗೆಲ್ಲೋದು ಹೊಸ ವಿಷ್ಯವೇನಲ್ಲ. ಅವ್ನು ಒಂದು, ಎರಡು ಬಾರಿಯಲ್ಲ 14 ಬಾರಿ ಲಾಟರಿ ಗೆದ್ದಿದ್ದಾನೆ. ವಿಶೇಷವೆಂದ್ರೆ 14 ಬಾರಿ ಲಾಟರಿ ಗೆದ್ದ ಗಣಿತಜ್ಞ ಸ್ಟೀಫನ್ ಮ್ಯಾಂಡೆಲ್ ಒಮ್ಮೆಯೂ ನಿಯಮ ಮುರಿದಿಲ್ಲ.
ಕೆಲಸದ ಜೊತೆ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಆತ ಲಾಟರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದ. ವರದಿ ಪ್ರಕಾರ, ರೊಮೇನಿಯಾದಲ್ಲಿ ಜನಿಸಿರುವ ಆಸ್ಟ್ರೇಲಿಯಾದ ನಾಗರಿಕ ಸ್ಟೀಫನ್ ಮ್ಯಾಂಡೆಲ್ ಲಾಟರಿ ಗೆಲ್ಲಲು ಗಣತ ಜ್ಞಾನವನ್ನು ಬಳಸಿಕೊಂಡಿದ್ದಾನೆ. ಅರ್ಥಶಾಸ್ತ್ರಜ್ಞ ಮ್ಯಾಂಡೆಲ್ ಐದು ಸಂಖ್ಯೆ ನಂತ್ರ 6 ರ ಅಂಕಿಯನ್ನು ನಿಖರವಾಗಿ ಅಂದಾಜಿಸಲು ಶುರು ಮಾಡಿದ್ದ. ರೊಮೇನಿಯಾದಲ್ಲಿ ದೊಡ್ಡ ಮೊತ್ತದ ಬಹುಮಾನ ಪಡೆದು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾನೆ.
ಜೇಬಿನಲ್ಲಿ ಈ ವಸ್ತುವಿಟ್ಟರೆ ಆರ್ಥಿಕ ನಷ್ಟ ನಿಶ್ಚಿತ
ಅಲ್ಲಿಯೂ 12 ಲಾಟರಿಗಳನ್ನು ಗೆದ್ದಿದ್ದಾನೆ ಮ್ಯಾಂಡಲ್. ಈತನ ಮೇಲೆ ಆಸ್ಟ್ರೇಲಿಯಾ ಸರ್ಕಾರದ ಕಣ್ಣು ಬಿದ್ದಿತ್ತು. ಹಾಗಾಗಿ ಲಾಟರಿ ನಿಯಮದಲ್ಲಿ ಬದಲಾವಣೆ ಮಾಡಲಾಯ್ತು. ಒಬ್ಬ ವ್ಯಕ್ತಿ ಎಲ್ಲ ಟಿಕೆಟ್ ಖರೀದಿ ಮಾಡಬಾರದೆಂಬ ನಿಯಮ ಜಾರಿಗೆ ಬಂತು. ಇದಾದ ನಂತ್ರ ನಾಲ್ಕೈದು ಪಾರ್ಟನರ್ ಸೇರಿಸಿ ಸಣ್ಣ ಗುಂಪು ಮಾಡಿಕೊಂಡು ಲಾಟರಿ ಖರೀದಿ ಮಾಡ್ತಿದ್ದ ಮ್ಯಾಂಡಲ್. ಆಸ್ಟ್ರೇಲಿಯಾ ಒಂದೇ ಅಲ್ಲ ಅಮೆರಿಕಾದಲ್ಲೂ ಲಾಟರಿ ಖರೀದಿ ಮಾಡಿ 3 ಕೋಟಿ ಡಾಲರ್ ಗಳಿಸಿದ್ದಾನೆ. ಬ್ರಿಟನ್ ಮತ್ತು ಇಸ್ರೇಲ್ ನಲ್ಲಿ ಕೂಡ ಲಾಟರಿ ಖರೀದಿ ಮಾಡಿದ್ದಾನೆ.