ಸೆಕ್ಸ್ ಸೆಷನ್ ನಂತ್ರ ಬಹುತೇಕ ಪುರುಷರು ನಿದ್ರೆಗೆ ಜಾರುತ್ತಾರೆ. ಸೆಕ್ಸ್ ನಂತ್ರ ಪ್ರೀತಿಯ ಅಪ್ಪುಗೆ, ಮಾತು ಬೇಕೆಂದು ಮಹಿಳೆಯರು ಬಯಸ್ತಾರೆ. ಮುಂದಿನ ಬಾರಿ ನಿಮ್ಮ ಸಂಗಾತಿ ಕೂಡ ನಿದ್ರೆಗೆ ಜಾರಿದ್ರೆ ಸಂಗಾತಿಗೆ ನನ್ನ ಮೇಲೆ ಪ್ರೀತಿಯಿಲ್ಲ ಎಂದುಕೊಳ್ಳಬೇಡಿ. ಪ್ರೀತಿಗೂ ನಿದ್ರೆಗೂ ಸಂಬಂಧವಿಲ್ಲ. ಸೆಕ್ಸ್ ನಂತ್ರ ನಿದ್ರೆ ಬರಲು ವೈಜ್ಞಾನಿಕ ಕಾರಣವಿದೆ.
ಸಂಭೋಗದಲ್ಲಿ ಪರಾಕಾಷ್ಠೆ ತಲುಪಿದ ನಂತ್ರ ಪುರುಷರ ದೇಹದಲ್ಲಿ ಬದಲಾವಣೆಯಾಗುತ್ತದೆ. ಪ್ರೊಲ್ಯಾಕ್ಟಿನ್ ಹೆಸರಿನ ಬಯೋಕೆಮಿಕಲ್ ಬಿಡುಗಡೆಯಾಗುತ್ತದೆ. ಇದ್ರಿಂದ ದೇಹ ದಣಿಯುತ್ತದೆ. ತಕ್ಷಣ ನಿದ್ರೆ ಬರುತ್ತದೆ.
ಮಹಿಳೆಯರಿಗೆ ಸೆಕ್ಸ್ ನಂತ್ರ ನಿದ್ರೆ ಬರುವುದಿಲ್ಲ. ಸಂಭೋಗದ ನಂತ್ರವೂ ಉತ್ತೇಜಿತರಾಗಿರುವ ಮಹಿಳೆಯರು ಸಂಗಾತಿಯಿಂದ ಇನ್ನಷ್ಟು ಪ್ರೀತಿ ಬಯಸುತ್ತಾರೆ.
ಸೆಕ್ಸ್ ನಂತ್ರ ಮಹಿಳೆಯರ ಸ್ನಾಯುಗಳು ಪುರುಷರಷ್ಟು ದಣಿದಿರುವುದಿಲ್ಲ ಹಾಗಾಗಿ ಅವ್ರು ಕಡಿಮೆ ಸೋಮಾರಿತನ ಹಾಗೂ ನಿಷ್ಕ್ರಿಯತೆ ಅನುಭವಿಸುತ್ತಾರೆ. ಬಹುಬೇಗ ಅವರಿಗೆ ನಿದ್ರೆ ಬರುವುದಿಲ್ಲ.
ಸಂಭೋಗದ ನಂತ್ರ ಆಕ್ಸಿಟೋಕ್ಸಿನ್ ಎಂಬ ಹಾರ್ಮೋನು ಬಿಡುಗಡೆಯಾಗುತ್ತದೆ. ಇದು ದೇಹವನ್ನು ಸಡಿಲಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದ್ರಿಂದ ನಿದ್ರೆ ಸುಲಭವಾಗಿ ಬರುತ್ತದೆ. ಕತ್ತಲೆಯ ಸೆಕ್ಸ್ ಕೂಡ ನಿದ್ರೆಗೆ ಆಹ್ವಾನ ನೀಡುತ್ತದೆ.