ಅಕ್ಷಯ ತೃತೀಯದಂದು ದಾನ, ವೃತಕ್ಕೆ ವಿಶೇಷ ಮಹತ್ವವಿದೆ. ಹಾಗೆ ಅಕ್ಷಯ ತೃತೀಯದಂದು ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಅಕ್ಷಯ ತೃತೀಯದಂದು ಬೆಳಿಗ್ಗೆ ಸ್ನಾನ ಮಾಡದೆ ತುಳಸಿಯನ್ನು ಮುಟ್ಟಬಾರದು. ಭಗವಂತ ವಿಷ್ಣುವಿಗೆ ತುಳಸಿ ಬಹುಪ್ರಿಯ. ಹಾಗಾಗಿ ಈ ದಿನ ಸ್ನಾನ ಮಾಡದೆ ತುಳಸಿ ಮುಟ್ಟಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ.
ಅಕ್ಷಯ ತೃತೀಯದಂದು ತಾಯಿ ಲಕ್ಷ್ಮಿ ಪೂಜೆ ಮಾಡುವಾಗ ಶುದ್ಧತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಪೂಜೆಗಿಂತ ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು.
ಬೇರೆ ಯಾವುದೋ ವೃತ ಮಾಡುತ್ತಿದ್ದರೆ ಅಕ್ಷಯ ತೃತೀಯದಂದು ಅದನ್ನು ಮುಗಿಸಬೇಡಿ.
ಈ ದಿನ ಉಪನಯನ ಸಂಸ್ಕಾರವನ್ನು ಮಾಡಬಾರದು. ಇದು ಅಶುಭ. ಅಕ್ಷಯ ತೃತೀಯದಂದು ಮೊದಲ ಬಾರಿ ಜನಿವಾರ ಹಾಕಬಾರದು.
ಕೆಲ ಕ್ಷೇತ್ರಗಳಿಗೆ ಅಕ್ಷಯ ತೃತೀಯದಂದು ಹೋಗಬಾರದು.
ಅಕ್ಷಯ ತೃತೀಯದಂದು ಮನೆ ಖರೀದಿ ಮಾಡುವುದು ಶುಭ. ಆದ್ರೆ ಮನೆ ಕಟ್ಟುವ ಕೆಲಸವನ್ನು ಆರಂಭಿಸಬಾರದು.
ಅಕ್ಷಯ ತೃತೀಯದಂದು ಗಿಡವನ್ನು ನೆಡಬಾರದು.