ಪತಿ-ಪತ್ನಿ ಮಧ್ಯೆ ಸಣ್ಣಪುಟ್ಟ ಗಲಾಟೆ ಮಾಮೂಲಿ. ಕೆಲವೊಮ್ಮೆ ಸಣ್ಣ ಸಣ್ಣ ವಿಷ್ಯ ದೊಡ್ಡ ಗಲಾಟೆಗೆ ಕಾರಣವಾಗುತ್ತದೆ. ಸಂಬಂಧ ಸುಧಾರಿಸಲು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ. ಪತಿ-ಪತ್ನಿ ಗಲಾಟೆಗೆ ವಾಸ್ತುದೋಷವೂ ಒಂದು ಕಾರಣವಾಗಿರಬಹುದು. ಸಣ್ಣ ಸಣ್ಣ ವಾಸ್ತು ದೋಷ ಸಂಬಂಧ ಹಾಳು ಮಾಡುತ್ತದೆ.
ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಪಾತ್ರೆಗಳನ್ನು ಇಡಬೇಡಿ. ಮಲಗುವ ಕೋಣೆಯಲ್ಲಿ ಪಾತ್ರೆಗಳಿದ್ದರೆ ಮನಸ್ಸು ಕದಡುತ್ತದೆ. ಇದ್ರ ಪ್ರಭಾವ ಸಂಬಂಧದ ಮೇಲಾಗುತ್ತದೆ.
ಮಲಗುವ ಕೋಣೆಯಲ್ಲಿ ಪೊರಕೆ ಇಡುವುದು ಹಾಗೂ ಒಂದಕ್ಕಿಂತ ಹೆಚ್ಚು ಶೂಗಳನ್ನು ಇಡುವುದ್ರಿಂದ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ.
ಮನೆಯಲ್ಲಿ ಹಾಳಾದ, ಮುರಿದ, ಬಳಕೆಗೆ ಬರದ ವಸ್ತುಗಳು ಕೂಡ ಸಂಬಂಧದ ಮೇಲೆ ಪ್ರಭಾವ ಬೀರುತ್ತವೆ.
ಮನೆ ದಕ್ಷಿಣಾಭಿಮುಖವಾಗಿ ಇದೆಯೇ…? ಈ ವಾಸ್ತು ದೋಷದಿಂದ ಪಾರಾಗೋಕೆ ಇಲ್ಲಿದೆ ಪರಿಹಾರ
ಮನೆಯಲ್ಲಿ ಹಾಳಾದ ಗಡಿಯಾರ ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಜೊತೆಗೆ ದಂಪತಿ ಜಗಳಕ್ಕೆ ಕಾರಣವಾಗುತ್ತದೆ.
ಮಲಗುವ ಕೋಣೆಯಲ್ಲಿ ಕೆಟ್ಟ ಚಿತ್ರಗಳನ್ನು ಅಥವಾ ಕನ್ನಡಿಯನ್ನು ಹಾಕಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಇದು ದಾಂಪತ್ಯವನ್ನು ಹಾಳು ಮಾಡುತ್ತದೆ.
ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಡಬೇಡಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003