ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ ನಾವು ಯಾವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇವೆ ಗೊತ್ತಾ?
ಮಧ್ಯರಾತ್ರಿ ಸಹೋದರರೊಂದಿಗೆ ಆಡುತ್ತಿದ್ದ ಜಗಳ.
ನಿಮ್ಮ ಹವ್ಯಾಸಗಳೊಂದಿಗೆ ನೀವು ಕಳೆದುಹೋಗುತ್ತಿದ್ದುದು.
ಚಹಾ ಕುಡಿಯುತ್ತಾ ಅಮ್ಮನೊಂದಿಗೆ ಹರಟೆ ಹೊಡೆಯುತ್ತಿದ್ದುದು.
ಶುಕ್ರವಾರ ಸಂಜೆ ಸ್ನೇಹಿತರೊಂದಿಗೆ ಸಡನ್ ಪ್ಲಾನ್ ಮಾಡುತ್ತಿದ್ದು.
ತಂದೆ ಪ್ಲಾನ್ ಮಾಡಿದ್ದ ಟ್ರಿಪ್ ಗೆ ವರ್ಷಕ್ಕೊಮ್ಮೆ ಹೋಗಿ ಬರುತ್ತಿದ್ದುದು.
ತಂದೆಯಿಂದ ಹಣ ಪಡೆದು ಸಖತ್ತಾಗಿ ಶಾಪಿಂಗ್ ಮಾಡಿದ್ದು.
ಕಸಿನ್ ಜೊತೆಗೆ ರಾತ್ರಿಯಿಡಿ ಹರಟಿದ್ದು.
ಮಧ್ಯಾಹ್ನ ಮಲಗುತ್ತಿದ್ದುದು.
ಕುಡಿದು ಮಲಗುತ್ತಿದ್ದುದು ಮತ್ತು ಯಾವುದೇ ಹ್ಯಾಂಗೋವರ್ ಇಲ್ಲದೆಯೇ ಏಳುತ್ತಿದ್ದುದು.
ಭವಿಷ್ಯದ ಚಿಂತೆ ಇಲ್ಲದೆಯೇ ಡೇಟಿಂಗ್ ಮಾಡುತ್ತಿದ್ದುದು.
ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವುದು.
ಬೇಕೆನಿಸಿದೆಲ್ಲವನ್ನೂ ತಿನ್ನುವುದು.
ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು.
ಪೋಷಕರ ಬಳಿ ಎಕ್ಸ್ ಟ್ರಾ ಹಣ ಕೇಳಿ ಪಡೆಯುವುದು.
ಹೆಚ್ಚು ಯೋಚಿಸದೇ ಒಬ್ಬರನ್ನು ಪ್ರೀತಿಸುವುದು.
ಕನಸು ಕಾಣುವುದು. ಈಡೇರಿಸಿಕೊಳ್ಳುವುದರ ಬಗ್ಗೆ ಹೆಚ್ಚು ಯೋಚಿಸದಿರುವುದು.
ಹೆಚ್ಚಿನ ಜವಾಬ್ದಾರಿಯಿಲ್ಲದೇ, ಸ್ವಚ್ಛಂದವಾಗಿರುವುದು.