ಕಪಾಟಿನ ಹೆಸರು ಕೇಳ್ತಿದ್ದಂತೆ ಕಣ್ಣ ಮುಂದೆ ಬರೋದು ಹಣ, ಆಭರಣ. ಕಪಾಟಿನಲ್ಲಿ ಸಾಮಾನ್ಯವಾಗಿ ಅಮೂಲ್ಯ ವಸ್ತುಗಳನ್ನು ಇಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯ ಕಪಾಟಿನಲ್ಲಿ ದುಬಾರಿ ಬೆಲೆಯ ಆಭರಣ, ನಗದನ್ನು ಇಡೋದಿಲ್ಲ. ಬ್ಯಾಂಕ್ ಲಾಕರ್ ನಲ್ಲಿ ಹಣ, ಆಭರಣಗಳನ್ನು ಇಡುತ್ತಾರೆ. ಕಪಾಟಿನಲ್ಲಿ ಅನವಶ್ಯಕ ವಸ್ತುಗಳೇ ಹೆಚ್ಚಿರುತ್ತವೆ.
ವಾಸ್ತುಶಾಸ್ತ್ರದ ಪ್ರಕಾರ ಕಪಾಟಿನಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು. ಅದು ಧನ ವೃದ್ಧಿ ಬದಲು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಕಪಾಟಿನ ಮುಖ ಉತ್ತರ ದಿಕ್ಕಿಗಿರಬೇಕು. ಇದು ಧನ ವೃದ್ಧಿಗೆ ದಾರಿಯಾಗುತ್ತದೆ.
ಕಪಾಟಿನಲ್ಲಿ ಕೋರ್ಟ್-ಕಚೇರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಇಡಬಾರದು. ಇದು ಧನ ಹಾನಿಗೆ ಕಾರಣವಾಗುತ್ತದೆ.
ದೇವರ ಮನೆಯಲ್ಲಿ ಹಣವಿಡಬೇಡಿ. ಇದು ಕೂಡ ಧನ ಹಾನಿಗೆ ಕಾರಣವಾಗುತ್ತದೆ.
ಆರ್ಥಿಕ ಮುಗ್ಗಟ್ಟು ಎದುರಾದ್ರೂ ಕಪಾಟನ್ನು ಖಾಲಿಯಾಗಿ ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.
ಕೆಲ ನೋಟಿಗೆ ಸೆಂಟ್ ಹಾಕಿ ಕಪಾಟಿನಲ್ಲಿಡಿ. ಇದು ಮನೆಯ ಬಡತನವನ್ನು ತೊಡೆದು ಹಾಕುತ್ತದೆ.
ನವಿಲು ಗರಿಗೆ ಗುಲಾಬಿ ಸುಗಂಧವನ್ನು ಸಿಂಪಡಿಸಿ. ನಂತ್ರ ಬಿಳಿ ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿಡಿ.
ಮುತ್ತಿನ ಶಂಖವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಇಡಿ.