ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು ನೆರವಾಗುತ್ತದೆ.
ಸೆಕ್ಸ್ ನಿಮ್ಮ ಬೇರೆ ಬೇರೆ ರೂಪಗಳನ್ನು ಅನ್ವೇಷಣೆ ಮಾಡಲು ನೆರವಾಗುತ್ತದೆ. ಉದಾಹರಣೆಗೆ ದಿನವಿಡೀ ಆಲಸಿಯಾಗಿದ್ದರೂ ಬೆಡ್ ನಲ್ಲಿ ನೀವು ಉತ್ಸಾಹಿತರಾಗಿರಬಹುದು. ಇಲ್ಲ ಹಗಲಲ್ಲಿ ಅನೇಕರನ್ನು ಆಕರ್ಷಿಸುವ ನೀವು ರಾತ್ರಿ ನಿಮ್ಮನ್ನು ಸಂಗಾತಿ ಆಕರ್ಷಿಸಲಿ ಎಂದು ಬಯಸಬಹುದು.
ಸೆಕ್ಸ್ ಸಂಗಾತಿಗಳು ಭಾವನಾತ್ಮಕವಾಗಿ ಹತ್ತಿರ ಬರಲು ಸಹಾಯವಾಗುತ್ತದೆ. ಸೆಕ್ಸ್ ಒಂದು ದೈಹಿಕ ಕ್ರಿಯೆ ಎನ್ನುವಂತೆ ನೋಡುವ ಬದಲು ಅದನ್ನು ಹೃದಯವನ್ನು ಬೆಸೆಯುವ ಸಾಧನ ಎನ್ನುವಂತೆ ನೋಡಿ.
ಸೆಕ್ಸ್ ನಿಮ್ಮ ದಿನದ ಆಯಾಸವನ್ನು ಹಾಗೂ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಸೆಕ್ಸ್ ವೇಳೆ ನೀವು ಎಲ್ಲವನ್ನೂ ಮರೆತು ರಿಲ್ಯಾಕ್ಸ್ ಆಗ್ತೀರಿ.
ಸೆಕ್ಸ್ ನಲ್ಲಿ ನೀವು ಸಾಕಷ್ಟು ಪ್ರಯೋಗಗಳನ್ನು ಮಾಡಬಹುದು. ಹೊಸ ವಿಧಾನ ಅಥವಾ ಹೊಸ ಜಾಗಗಳನ್ನು ಆಯ್ಕೆ ಮಾಡಿಕೊಂಡು ಲೈಂಗಿಕ ಜೀವನವನ್ನು ಇನ್ನಷ್ಟು ಸುಮಧುರಗೊಳಿಸಬಹುದು.
ಕೆಲವರು ಸಂಭೋಗದ ವೇಳೆ ಅಂತಿಮ ಸಂತೋಷಕ್ಕೆ ಕಾಯುತ್ತಾರೆ. ಇದ್ರಿಂದಾಗಿ ಉಳಿದ ಸಮಯದ ಸಂತೋಷವನ್ನು ಎಂಜಾಯ್ ಮಾಡುವುದಿಲ್ಲ. ಮಾತ್ರೆ ಅಥವಾ ಜೀವನ ಶೈಲಿಯಲ್ಲಾಗುವ ಏರುಪೇರಿನಿಂದಾಗಿ ಕೆಲವೊಮ್ಮೆ ಅಂತಿಮ ಸಂತೋಷ ಸಿಗುವುದಿಲ್ಲ. ಹಾಗಂತ ದಂಪತಿಗೆ ಸೆಕ್ಸ್ ಸುಖ ಸಿಕ್ಕಿಲ್ಲವೆಂದು ಅರ್ಥವಲ್ಲ.