![](https://kannadadunia.com/wp-content/uploads/2018/03/After-sex-1.jpg)
ಸಂಭೋಗದ ನಂತ್ರ ಎಲ್ಲವೂ, ಎಲ್ಲರೂ ಖುಷಿಯಾಗಿರಬೇಕೆಂದೇನೂ ಇಲ್ಲ. ಶಾರೀರಿಕ ಸಂಬಂಧದ ನಂತ್ರ ಎಲ್ಲ ಸಂಗಾತಿಗಳು ಅಪ್ಪಿಕೊಂಡು, ಕಿವಿಯಲ್ಲಿ ಪ್ರೀತಿಯ ಮಾತುಗಳನ್ನಾಡುವುದಿಲ್ಲ. ಕೆಲವರು ನೀಡುವ ಪ್ರತಿಕ್ರಿಯೆ ಅಥವಾ ಮಾತು ವಿಚಿತ್ರವಾಗಿರುತ್ತದೆ.
ಮೊದಲ ಸಂಭೋಗದ ನಂತ್ರ ಕೆಲವರು ಮೌನಿಯಾಗಿರುತ್ತಾರೆ. ಸಂಗಾತಿಗೆ ಹಾಸಿಗೆಯಲ್ಲಿ ನನ್ನ ಪ್ರದರ್ಶನ ಇಷ್ಟವಾಯ್ತಾ ಇಲ್ವಾ? ಆಕೆ ನನ್ನನ್ನು ಬಿಟ್ಟು ಹೋದ್ರೆ ಎಂಬ ಪ್ರಶ್ನೆಗಳು ಕಾಡುತ್ತವೆ. ಕೆಲವರು ಇದನ್ನು ಸಂಗಾತಿಗೆ ಹೇಳುತ್ತಾರೆ ಕೂಡ.
ಇನ್ನೂ ಕೆಲವರು ಯಾವುದೋ ಘಟನೆ ನೆನೆದು ಸೆಕ್ಸ್ ನಂತ್ರ ಅಳುತ್ತಾರೆ. ವ್ಯಕ್ತಿಯೊಬ್ಬರ ಪತ್ನಿ ಸೆಕ್ಸ್ ನಂತ್ರ ಅಳಲು ಶುರು ಮಾಡಿದ್ದಳಂತೆ. ಯಾಕೆ ಅಳ್ತಿದ್ದಾಳೆ ಎಂಬುದು ಗೊತ್ತಾಗದೆ ಪತಿ ಕಂಗಾಲಾಗಿದ್ದನಂತೆ. ಕಷ್ಟ ಪಟ್ಟು ಪತ್ನಿಯನ್ನು ಸಮಾಧಾನ ಮಾಡಿ ಕೇಳಿದಾಗ ಆಕೆ ಹೇಳಿದ ಉತ್ತರ ಈಗ್ಲೂ ನಗು ತರಿಸುತ್ತೆ ಎನ್ನುತ್ತಾರೆ. 2 ದಿನಗಳ ಹಿಂದೆ ಅತ್ತೆ ಬೈದಿದ್ದಳು.ಅದನ್ನು ನಿಮ್ಮ ಮುಂದೆ ಹೇಳಲು ಭಯವಾಗ್ತಿತ್ತು. ಅದನ್ನು ನೆನೆದು ಈಗ ಅಳು ಬಂತು ಎಂದಿದ್ದಳಂತೆ ಪತ್ನಿ.
ಸೆಕ್ಸ್ ನಂತ್ರ ಗಲಾಟೆ, ಜಗಳ ಮಾಡಿಕೊಳ್ಳುವವರೂ ಇದ್ದಾರೆ. ಸಣ್ಣ ವಿಷ್ಯ ದೊಡ್ಡದಾಗಿ ಅದು ಗಲಾಟೆಗೆ ಕಾರಣವಾಗುತ್ತದೆ. ದಂಪತಿ ಸೆಕ್ಸ್ ನಂತ್ರ ರಾಜಕೀಯದ ಬಗ್ಗೆ ಮಾತುಕತೆ ಶುರು ಮಾಡಿದ್ದರಂತೆ. ಇಬ್ಬರ ವಾದ ಮಿತಿ ಮೀರಿ ಪತಿ ಕೂಗಾಡಿದ್ದನಂತೆ. ನಿನ್ನ ರಾಜಕೀಯ ಯೋಜನೆ ನನಗೆ ಇಷ್ಟವಾಗುವುದಿಲ್ಲ ಎಂದಿದ್ದನಂತೆ. ಇದಾದ ಕೆಲ ಗಂಟೆ ಇಬ್ಬರೂ ಮಾತು ಬಿಟ್ಟಿದ್ದರಂತೆ.
ಕೆಲವರು ಸೆಕ್ಸ್ ನಂತ್ರ ಆಲಸಿಯಾದ್ರೆ ಮತ್ತೆ ಕೆಲವರು ತಿನ್ನುವ ಬಯಕೆ ವ್ಯಕ್ತಪಡಿಸ್ತಾರೆ. ಮಹಿಳೆಯೊಬ್ಬಳು ತನ್ನ ಅನುಭವವನ್ನು ಹೇಳಿದ್ದಾಳೆ. ಆಕೆ ಸೆಕ್ಸ್ ನಂತ್ರ ತುಂಬಾ ಆಲಸಿಯಾಗಿದ್ದಳಂತೆ. ಹಾಸಿಗೆಯಿಂದ ಏಳುವ ಮನಸ್ಸಿರಲಿಲ್ಲವಂತೆ. ಆದ್ರೆ ತುಂಬಾ ಹಸಿವಾಗಿತ್ತಂತೆ. ರಾತ್ರಿ 3 ಗಂಟೆಗೆ ಪತಿಯನ್ನು ಅಡುಗೆ ಮನೆಗೆ ಕಳುಹಿಸಿ ಆಮ್ಲೆಟ್ ಮಾಡಿಸಿಕೊಂಡು ತಿಂದಿದ್ದಳಂತೆ.