ಹೆಣ್ಣುಮಕ್ಕಳು ಫ್ಯಾಷನ್ ಪ್ರಿಯರು. ಅಡಿಯಿಂದ ಮುಡಿಯವರೆಗೆ ಚೆನ್ನಾಗಿ ಕಾಣಿಸಬೇಕೆಂಬುದು ಬಹುತೇಕರ ಆಸೆ. ಇದಕ್ಕೆ ಉಗುರುಗಳೂ ಹೊರತಾಗಿಲ್ಲ. ಉಗುರುಗಳಿಗೆ ಬರೀ ನೈಲ್ ಪಾಲಿಶ್ ಹಚ್ಚದೇ ಅದರಲ್ಲೂ ಡಿಫರೆಂಟಾಗಿ ಕಾಣಿಸೋ ನೈಲ್ ಆರ್ಟ್ ಮಾಡಿದರೆ ಇನ್ನಷ್ಟು ಸುಂದರವಾಗಿ ಕಾಣೋದ್ರಲ್ಲಿ ಡೌಟಿಲ್ಲ.
ಫ್ರೆಂಚ್ ಟಿಪ್ ಮೆನಿಕ್ಯೂರ್….ನಿಮ್ಮ ಉಗುರು ಉದ್ದವಿರಲಿ ಅಥವಾ ಸಣ್ಣದಿರಲಿ ಈ ವಿಧಾನ ಚೆನ್ನಾಗಿ ಕಾಣುತ್ತೆ. ಉಗುರಿನ ತುದಿಯಲ್ಲಿ ಲೇಯರ್ ರೀತಿಯಲ್ಲಿ ಅಲಂಕರಿಸುವ ಈ ವಿಧಾನ ಕ್ಲಾಸಿಕ್ ಲುಕ್ ನೀಡುತ್ತೆ.
ನಿಮ್ಮ ಉಗುರುಗಳ ಮೇಲೆ ನಿಮ್ಮಿಷ್ಟದ ಕಾರ್ಟೂನ್ ಡಿಸೈನ್ ಗಳನ್ನು ಹಾಕಿಕೊಳ್ಳೋದು. ಬೇರೆ ಬೇರೆ ಉಗುರುಗಳಿಗೆ ಬೇರೆ ಬೇರೆ ಥೀಮ್ ಗಳನ್ನೂ ಹಾಕಿಕೊಳ್ಳಬಹುದು.
ಬಹಳ ಸರಳವಾಗಿರೋ ವಿಧಾನ ಉಗುರುಗಳ ಮೇಲೆ ಹಾಕಿಕೊಳ್ಳುವ ಕ್ಯಾಂಡಿ ಸ್ಟ್ರೈಪ್ಸ್. ಎರಡು ಕಲರ್ ಕಾಂಬಿನೇಷನ್ ಮಾಡಿಕೊಂಡು ಮಧ್ಯದಲ್ಲಿ ಗೆರೆ ಎಳೆದರಾಯಿತು. ನಿಮ್ಮ ಡ್ರೆಸ್ ಗೆ ಮ್ಯಾಚಿಂಗ್ ಬಣ್ಣವಿದ್ದರೆ ಚೆನ್ನಾಗಿರುತ್ತೆ.
ಸೀಸನಲ್ ಫ್ರೂಟ್ ಗಳನ್ನು ಉಗುರಿನ ಮೇಲೆ ಬರೆದುಕೊಳ್ಳುವ ಹೊಸ ಡಿಸೈನ್ ಚೆನ್ನಾಗಿರುತ್ತೆ. ಬೇರೆ ಬೇರೆ ಹಣ್ಣುಗಳನ್ನು ಬೇರೆ ಬೇರೆ ಉಗುರಿನ ಮೇಲೆ ಡಿಸೈನ್ ಮಾಡಬಹುದು.
ಉಗುರಿನ ತುದಿಯಲ್ಲಿ ಕರ್ಣಕೋನ ಆಕಾರದಲ್ಲಿ ಎರಡು ಡಿಫರೆಂಟ್ ಶೇಡ್ ಗಳಿಂದ ಡಿಸೈನ್ ಮಾಡಬಹುದು.
ಯಾವಾಗಲೂ ಬಟ್ಟೆಗಳಿಗೆ ಮ್ಯಾಚ್ ಆಗೋ ಹಾಗೆ ನೈಲ್ ಪಾಲಿಶ್ ಹಾಕೋದಕ್ಕಾಗಲ್ಲ. ಹೀಗಾಗಿ ಉಗುರಿನ ಕಲರ್, ಪಿಂಕ್, ಕ್ರೀಮ್, ಬ್ರೌನ್ ಬಣ್ಣಗಳು ಯಾವಾಗಲೂ ಕ್ಲಾಸಿಕ್ ಆಗಿ ಕಾಣುತ್ತೆ.
ನೀವು ಯಾವುದಾದರೂ ಫಂಕ್ಷನ್ ಹೋಗೋದಾದ್ರೆ ಗ್ರಾಂಡಾಗಿ ಕಾಣುವಂತಹ ಅಲಂಕಾರಿಕ ಸ್ಟೋನ್ ಗಳನ್ನೂ ಉಗುರಿಗೆ ಹಾಕಿಕೊಳ್ಳಬಹುದು.
ದಿನಾಲೂ ಆಫೀಸಿಗೆ ಹೋಗುವವರು ಕ್ಲಾಸಿಕ್ ಆಗಿ ಕಾಣುವಂತಹ ಮರೂನ್ ಅಥವಾ ರೆಡ್ ಕಲರ್ ನೈಲ್ ಪಾಲಿಶ್ ಹಚ್ಚಿಕೊಳ್ಳಬಹುದು.
ಇನ್ನು ಕೂದಲಿನ ಕಲರ್ ಹಾಗೆಯೇ ಆರೆಂಜ್, ನೀಲಿ, ಬ್ಲಾಕ್ ಗ್ರೇ ನಂತಹ ಬಣ್ಣಗಳಿಂದ ಡಾರ್ಕ್ ನಿಂದ ಲೈಟ್ ಆಗುವ ಹಾಗೆ ಉಗುರಿಗೆ ಹಚ್ಚಿಕೊಳ್ಳಬಹುದು.