ಋತು ಬದಲಾಗ್ತಿದ್ದಂತೆ ಶೀತ, ಜ್ವರ, ಕೆಮ್ಮ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕಚೇರಿಯಿರಲಿ, ಸಾರ್ವಜನಿಕ ಸಾರಿಗೆಯಿರಲಿ ಸೋಂಕು ಬಹುಬೇಗ ಹರಡುತ್ತದೆ. ಸಾಮಾನ್ಯವಾಗಿ ಜ್ವರ, ಶೀತದ ಸೋಂಕುಗಳು ಉಸಿರಾಟದಿಂದ ಹರಡುತ್ತವೆ. ಸೀನಿದಾಗ, ಉಸಿರಾಡಿದಾಗ, ಕೆಮ್ಮಿದಾಗ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ.
ಫ್ಲೋರಿಡಾ ತಜ್ಞರ ಪ್ರಕಾರ, ಜ್ವರ ಹರಡುವ ಬ್ಯಾಕ್ಟೀರಿಯಾ ಉಸಿರಿನಲ್ಲಿ 24 ಗಂಟೆ, ಕೈ ನಲ್ಲಿ 15-30 ನಿಮಿಷ ಹಾಗೂ ಹಾಸಿಗೆಯಲ್ಲಿ 1-2 ಗಂಟೆ ಜೀವಂತವಾಗಿರುತ್ತವೆಯಂತೆ. ಸಾಮಾನ್ಯವಾಗಿ ಜ್ವರ, ಶೀತದಿಂದ ಬಳಲುತ್ತಿರುವವರಿಂದ 6 ಅಡಿ ದೂರದಲ್ಲಿರಿ ಎಂದು ವೈದ್ಯರು ಸಲಹೆ ನೀಡ್ತಾರೆ.
ಜ್ವರ, ಶೀತದ ವೇಳೆ ಲೈಂಗಿಕ ಸಂಪರ್ಕ ಬೆಳೆಸಬಹುದಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ತಜ್ಞರು ಬೇಡ ಎಂದೇ ಸಲಹೆ ನೀಡುತ್ತಾರೆ. ಸೆಕ್ಸ್ ವೇಳೆ ಪರಸ್ಪರ ಹತ್ತಿರ ಬರಬೇಕಾಗುತ್ತದೆ. ಈ ವೇಳೆ ಸೋಂಕಿರುವ ಸಂಗಾತಿ ಕೆಮ್ಮು ಅಥವಾ ಸೀನಿದ್ರೆ ಇನ್ನೊಬ್ಬರಿಗೆ ಸುಲಭವಾಗಿ ಸೋಂಕು ಹರಡುತ್ತದೆ.
ಜ್ವರ ಆರಂಭಕ್ಕಿಂತ ಒಂದು ವಾರ ಹಾಗು ಕಡಿಮೆಯಾದ ಮೇಲೆ 1 ವಾರ ನಮ್ಮ ದೇಹದಲ್ಲಿ ಸೋಂಕಿರುತ್ತದೆ. ಜ್ವರದಿಂದ ದೂರವಿರಬೇಕು ಎನ್ನುವವರು ಜ್ವರದಿಂದ ಬಳಲುವ ಸಂಗಾತಿಯಿಂದಲೂ ದೂರವಿರಬೇಕು. ಜ್ವರ ಕಡಿಮೆಯಾದ ಮೇಲೂ ಒಂದು ವಾರ ಸಂಬಂಧ ಬೆಳೆಸದಿರುವುದು ಒಳ್ಳೆಯದು. ದೈಹಿಕ ಸಂಬಂಧಕ್ಕಿಂತ ವೋರಲ್ ಸೆಕ್ಸ್ ಉತ್ತಮ ಎನ್ನುತ್ತಾರೆ ವೈದ್ಯರು. ಇದ್ರಲ್ಲಿ ಯಾವುದೇ ಸೋಂಕು ಹರಡುವ ಭಯವಿರುವುದಿಲ್ಲ.