ನೀರಿಲ್ಲದೆ ಬದುಕೋದು ಅಸಾಧ್ಯ. ಉತ್ತಮ ಆರೋಗ್ಯಕ್ಕೆ 8-10 ಲೋಟ ನೀರನ್ನು ಪ್ರತಿದಿನ ಕುಡಿಯಬೇಕು. ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿದ್ರೆ ಏನೇನು ಉಪಯೋಗ ಅಂತ ಈಗಾಗಲೇ ತಿಳಿಸಿದ್ದೇವೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದ್ರೆ ಏನು ಪ್ರಯೋಜನ? ಮತ್ತೆ ದಿನಕ್ಕೆ ಮೂರು ಲೀಟರ್ ನೀರು ಕುಡಿಯೋದನ್ನು ಹೇಗೆ ಅಭ್ಯಾಸ ಮಾಡಬೇಕು ಅಂತಾ ಇಂದು ತಿಳಿಯೋಣ.
ದಿನಕ್ಕೆ ಎರಡು ಗ್ಲಾಸ್ ನೀರು ಕುಡಿಯುವವರಿಗೆ 8 ಗ್ಲಾಸ್ ನೀರು ಕುಡಿಯುವಂತೆ ಹೇಳಿದ್ರೆ ಕಷ್ಟವಾಗುತ್ತೆ. ಹೊಟ್ಟೆಯಲ್ಲಿ ಶಬ್ದ ಬಂದ ಹಾಗೆ ಆಗುತ್ತೆ, ವಾಕರಿಕೆ ಬರುತ್ತೆ ಅಂತಾರೆ. ಹಾಗಾಗಿ ಜಾಸ್ತಿ ನೀರು ಕುಡಿಯುವುದನ್ನು ಕ್ರಮೇಣ ಅಭ್ಯಾಸ ಮಾಡಬೇಕು. ನೀರು ಕುಡಿಯುವ ಒಂದು ಗಂಟೆ ಮೊದಲು ಹಾಗೂ ನೀರು ಕುಡಿದ ಒಂದು ಗಂಟೆ ನಂತರ ಆಹಾರ ಸೇವಿಸಬೇಕು. ನೀರು ಕುಡಿದ ತಕ್ಷಣ ಘನ ಆಹಾರವನ್ನಂತೂ ಸೇವಿಸಬಾರದು.
ಆರಂಭದಲ್ಲಿ ಒಂದು ಲೀಟರ್ ನೀರು ಕುಡಿಯುವುದು ಕಷ್ಟ. ಮೊದಲು ಎರಡು ಗ್ಲಾಸ್ ನೀರು ಕುಡಿಯಿರಿ. 2 ನಿಮಿಷ ಬಿಟ್ಟು ಮತ್ತೆ 2 ಗ್ಲಾಸ್ ನೀರು ಕುಡಿಯಿರಿ. ಹೀಗೆ ಅಭ್ಯಾಸ ಮಾಡಿ. ಆರಂಭದಲ್ಲಿ ನೀವು ಶೌಚಾಲಯಕ್ಕೆ ಪದೇ ಪದೇ ಹೋಗಬೇಕಾಗುತ್ತದೆ. ಕ್ರಮೇಣ ನಿಮ್ಮ ದೇಹ ಇದಕ್ಕೆ ಹೊಂದಿಕೊಳ್ಳುವುದರಿಂದ ಆ ಸಮಸ್ಯೆ ಕಡಿಮೆಯಾಗುತ್ತದೆ.
ನೀರು ಕುಡಿದ್ರೆ ಓಡಿ ಹೋಗುತ್ತೆ ರೋಗ
ನೀರು ಕುಡಿಯುವುದರಿಂದ ದೀರ್ಘಕಾಲದ ರೋಗಗಳಿಂದ ಕೂಡ ಮುಕ್ತಿ ಹೊಂದಬಹುದು. ತಲೆನೋವು, ಮೈಕೈನೋವು, ಸಂಧಿವಾತ, ವೇಗದ ಹೃದಯದ ಬಡಿತ, ಅಸ್ತಮಾ, ಟಿಬಿ, ಮೂತ್ರಪಿಂಡ ಮತ್ತು ಮೂತ್ರ ರೋಗಗಳು ನಿಯಂತ್ರಣಕ್ಕೆ ಬರುತ್ತವೆ. ಇಷ್ಟೇ ಅಲ್ಲ ವಾಂತಿ, ಗ್ಯಾಸ್ ಸಮಸ್ಯೆ, ಅತಿಸಾರ, ಮಧುಮೇಹ, ಮಲಬದ್ಧತೆ, ಕಣ್ಣಿನ ಸಮಸ್ಯೆ, ಕಿವಿ, ಮೂಗು ಮತ್ತು ಗಂಟಲು ಸಂಬಂಧಿತ ರೋಗಗಳು, ಮುಟ್ಟಿನ ಸಮಸ್ಯೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ಸಮಸ್ಯೆಗೂ ನೀರು ಮದ್ದು.
ನೀರು ಕುಡಿಯುವ ವಿಧಾನ
ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿಯಿರಿ.
ಬ್ರಷ್ ಮಾಡಿದ 45 ನಿಮಿಷ ಏನನ್ನೂ ಕುಡಿದು ತಿಂದು ಮಾಡಬೇಡಿ.
ತಿಂಡಿ, ಊಟವಾಗಿ 15 ನಿಮಿಷದ ನಂತರ 2 ಗಂಟೆಯವರೆಗೆ ಏನೂ ತಿಂದು, ಕುಡಿದು ಮಾಡಬೇಡಿ.