alex Certify ಮಕ್ಕಳಿಗೆ ಇಷ್ಟವಾಗುವ ‘ಚಾಕೋಲೇಟ್ ಕೇಕ್’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಇಷ್ಟವಾಗುವ ‘ಚಾಕೋಲೇಟ್ ಕೇಕ್’ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು :

ಮೈದಾಹಿಟ್ಟು-100 ಗ್ರಾಂ, ಬೆಣ್ಣೆ-100 ಗ್ರಾಂ, ಮೊಟ್ಟೆಗಳು-3, ಕೋಕೊಪುಡಿ-2 ಚಮಚ, ಪುಡಿ ಸಕ್ಕರೆ-115 ಗ್ರಾಂ, ಅಡುಗೆ ಸೋಡ 1/4 ಚಮಚ, ಬೇಕಿಂಗ್ ಪೌಡರ್-3/4 ಚಮಚ, ವೆನಿಲಾ ಎಸೆನ್ಸ್-1 ಚಮಚ ಅಥವಾ ಚಾಕೊಲೇಟ್ ಎಸೆನ್ಸ್-1/2 ಚಮಚ, ಕಾರ್ನ್ ಫ್ಲೋರ್-1 ಚಮಚ, ತಾಜಾ ಕೆನೆ-2 ಚಮಚ, ಉಪ್ಪು-1 ಚಿಟಕಿ, ಹಾಲು-ಸಾಕಷ್ಟು.

ತಯಾರಿಸುವ ವಿಧಾನ :

ಮೈದಾ, ಬೇಕಿಂಗ್ ಪೌಡರ್, ಸೋಡಾ, ಕಾರ್ನ್ ಫ್ಲೋರ್, ಉಪ್ಪು ಮತ್ತು ಕೋಕೊ ಪುಡಿಯನ್ನು 3 ಬಾರಿ ಜರಡಿ ಮಾಡಿ. ಕೆನೆ, ಬೆಣ್ಣೆ ಮತ್ತು ಸಕ್ಕರೆಯನ್ನು ಹಗುರವಾಗಿ ತುಂಬಾ ಮೃದುವಾಗುವಂತೆ ಮಿಶ್ರ ಮಾಡಿ. ಒಂದೊಂದೆ ಮೊಟ್ಟೆಯನ್ನು ಸೇರಿಸಿ.

ಎಸೆನ್ಸ್ ಮತ್ತು ಬಣ್ಣ ಸೇರಿಸಿ ಚೆನ್ನಾಗಿ ಬೀಟ್ ಮಾಡಿ, ಕೆನೆ ಸೇರಿಸಿ. ಈ ಹಂತದಲ್ಲಿ ಗ್ಲಿಸರಿನ್ ಸೇರಿಸಿ. ಮೈದಾ ಮಿಶ್ರಣವನ್ನು ಕಟ್ ಅಂಡ್ ಫೋಲ್ಡ್ ಕ್ರಮದಿಂದ ಬೆರೆಸಿ ಹಾಲನ್ನು ಡ್ರಾಪಿಂಗ್ ಹದ ಬರುವಂತೆ ಸೇರಿಸಿ. ಗ್ರೀಸ್ ಮಾಡಿ ಹಿಟ್ಟು ಚಿಮುಕಿಸಿದ ಪಾತ್ರೆಗೆ ಸುರಿಯಿರಿ. 5 ನಿಮಿಷ ಸಮಯ ಹೊಂದಿಸಿ ಮೈಕ್ರೊ ಹೈ ಮಾಡಿರಿ. 5 ನಿಮಿಷ ಹೊಂದಿಕೊಳ್ಳಲು ಬಿಡಿ. ನಂತರ ಅಚ್ಚಿನಿಂದ ತೆಗೆದು ತಣ್ಣಗೆ ಮಾಡಿ. ಓವನನ್ನು 180 ಡಿಗ್ರಿ ಗೆ ಸೆಟ್ ಮಾಡಿ 40 ನಿಮಿಷಗಳವರೆಗೆ ಕೇಕನ್ನು ಬೇಯಿಸಿ 5 ನಿಮಿಷ ತಣ್ಣಗೆ ಮಾಡಿ. ಬಟ್ ಕಾಗದದ ಮೇಲೆ ಮಗುಚಿರಿ. ಚೆನ್ನಾಗಿ ತಣ್ಣಗೆ ಮಾಡಿ. ಚಾಕೋಲೇಟ್ ಐಸಿಂಗ್ ನಿಂದ ಅಲಂಕರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...