ಈ ಬಾರಿ ಜನವರಿ 15, 2022 ರ ಶನಿವಾರದಂದು ಎಲ್ಲೆಡೆ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಸಂಕ್ರಾಂತಿ ಬಳಿಕ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುತ್ತಾನೆ.
ಸಂಕ್ರಾಂತಿಗೂ ಮುನ್ನ ಒಂದು ತಿಂಗಳು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಸಂಕ್ರಾಂತಿ ನಂತ್ರ ಶುಭ ಮುಹೂರ್ತ ಶುರುವಾಗಲಿದೆ.
ಮಕರ ಸಂಕ್ರಾಂತಿ ದಿನ ಸ್ನಾನ, ದಾನ, ಜಪ, ತಪ, ಶುದ್ಧ ಆಚರಣೆಗೆ ಮಹತ್ವ ನೀಡಲಾಗುವುದು. ಈ ದಿನ ಮಾಡಿದ ದಾನ ಎರಡು ಪಟ್ಟಾಗಿ ವಾಪಸ್ ಬರಲಿದೆ ಎಂಬ ನಂಬಿಕೆಯಿದೆ. ಸಂಕ್ರಾಂತಿ ದಿನ ತುಪ್ಪ-ಎಳ್ಳು-ಕಂಬಳಿ, ಕಿಚಡಿಯನ್ನು ದಾನ ಮಾಡಬೇಕು.
ಮಕರ ಸಂಕ್ರಾಂತಿಯಂದು ಕೆಲವೊಂದು ಕೆಲಸಗಳನ್ನು ಮಾಡಬಾರದು. ಕೂದಲು ಕತ್ತರಿಸುವ ಹಾಗೂ ಗಡ್ಡ ತೆಗೆಯಬಾರದು.
ಈ ದಿನ ಕಹಿಯನ್ನು ಬೇರೆಯವರಿಗೆ ಕೊಡಬಾರದು. ಹಾಗೆ ಕಹಿಯನ್ನು ತಿನ್ನಬಾರದು.
ಸಂಕ್ರಾಂತಿ ದಿನ ಮರೆತೂ ಮರವನ್ನು ಕತ್ತರಿಸಬಾರದು.
ಮಾಂಸ ಮತ್ತು ಮದ್ಯವನ್ನು ಸಂಕ್ರಾಂತಿ ದಿನ ಸೇವಿಸಬಾರದು. ಕಿಚಡಿ ಅಥವಾ ಸಾತ್ವಿಕ ಆಹಾರವನ್ನು ಸೇವಿಸಬೇಕು.