ಅರಿಶಿನ ಅಡುಗೆ ಮನೆಯ ಸಂಗಾತಿ. ದಕ್ಷಿಣ ಭಾರತದ ಅಡುಗೆಗಳಲ್ಲಂತೂ ಅರಿಶಿನವನ್ನು ಹೆಚ್ಚಾಗಿ ಬಳಸ್ತಾರೆ. ಬಹುತೇಕ ಎಲ್ಲಾ ತಿನಿಸುಗಳಲ್ಲೂ ಅರಿಶಿನ ಬಳಕೆ ಸಾಮಾನ್ಯ. ಆರೋಗ್ಯಕ್ಕೂ ಅರಿಶಿನ ಬೇಕೇ ಬೇಕು. ಎಷ್ಟೋ ಬಗೆಯ ಇನ್ಫೆಕ್ಷನ್ ಗಳಿಗೆ ಅರಿಶಿನವೇ ಮದ್ದು. ಮಾತ್ರವಲ್ಲ ಕ್ಯಾನ್ಸರ್ ಅನ್ನು ಕೂಡ ಹೊಡೆದೋಡಿಸುವ ಶಕ್ತಿ ಇದಕ್ಕಿದೆ.
ಅರಿಶಿನದಲ್ಲಿ ಆ್ಯಂಟಿ ಇನ್ಫೆಕ್ಷನಲ್ ಪ್ರಾಪರ್ಟಿಸ್ ಹೆಚ್ಚಾಗಿದೆ. ಇದನ್ನು ಸೇವಿಸುವುದರಿಂದ ಉರಿಯೂತ ನಿವಾರಣೆಯಾಗುತ್ತದೆ. ಅರಿಶಿನದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳಿವೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ರೆ ಅರಿಶಿನ ಸೇವನೆಯಿಂದ ಗುಣವಾಗುತ್ತದೆ. ಅರಿಶಿನ ಕ್ಯಾನ್ಸರ್ ಕಾರಕಗಳನ್ನು ತಡೆಯುವ ಶಕ್ತಿ ಹೊಂದಿದೆ. ರಕ್ತದ ಕ್ಯಾನ್ಸರ್, ಸ್ತನ, ಅಂಡಾಶಯ, ಶ್ವಾಸಕೋಶ ಸೇರಿದಂತೆ ಇತರ ಕ್ಯಾನ್ಸರ್ ಗಳಿಂದ ಕೂಡ ಮುಕ್ತಿ ಪಡೆಯಬಹುದು.
ಅರಿಶಿನವನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ತಿಂದ ಆಹಾರವೆಲ್ಲ ಚೆನ್ನಾಗಿ ಪಚನವಾಗುತ್ತದೆ. ನಿಮಗೆ ಅಜೀರ್ಣ ಸಮಸ್ಯೆ ಇದ್ದಲ್ಲಿ ಅದನ್ನು ನಿವಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಅರಿಶಿನ ಬೇಕು. ಬುದ್ಧಿಮಾಂದ್ಯತೆಯಂತಹ ಅನೇಕ ಬಗೆಯ ನರದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಹೃದಯವನ್ನು ಕೂಡ ಅರಿಶಿನ ಆರೋಗ್ಯವಾಗಿ ಇಡಬಲ್ಲದು. ಬ್ಲಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ.