ಪ್ರತಿಯೊಂದು ಹುಡುಗಿಯರೂ ತಮ್ಮ ಪ್ರೀತಿಪಾತ್ರ ಗೆಳೆಯನ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಹೂ, ಚಾಕೊಲೇಟ್, ಡ್ರೆಸ್, ರೋಮ್ಯಾಂಟಿಕ್ ಡೇಟಿಂಗ್ ಒಂದೇ ಅಲ್ಲ ಅವರ ಪಟ್ಟಿ ದೊಡ್ಡದಿರುತ್ತದೆ. ಗೆಳತಿಯನ್ನು ಮೆಚ್ಚಿಸಲು ಗೆಳೆಯ ಅಡುಗೆ ಮಾಡೋದನ್ನೂ ಕಲಿಯಬೇಕಾಗುತ್ತೆ.
ಹಣಕಾಸಿನ ವ್ಯವಹಾರ : ಸ್ವತಂತ್ರ ಹುಡುಗಿ ತನ್ನ ಭದ್ರತೆಯ ಬಗ್ಗೆ ಯೋಚಿಸುತ್ತಾಳೆ. ಸಂಪಾದಿಸಿದ ಹಣವನ್ನು ಹೇಗೆ ಖರ್ಚು ಮಾಡಬೇಕು? ಎಷ್ಟು ಹಣವನ್ನು ಉಳಿಸಬೇಕು ಎನ್ನುವ ಬಗ್ಗೆ ಚಿಂತಿಸುತ್ತಾಳೆ ಮತ್ತು ತನ್ನ ಗೆಳೆಯ ಹಣವನ್ನು ಹೇಗೆ ಉಳಿಸಬೇಕೆಂಬ ಬಗ್ಗೆ ಪ್ಲಾನ್ ಹೊಂದಿರಬೇಕು. ಹಣಕಾಸಿನ ವಿಷಯದಲ್ಲಿ ಅಸಡ್ಡೆ ಹೊಂದಿರಬಾರದೆಂದು ಬಯಸುತ್ತಾಳೆ.
ಮನೆ ವಸ್ತುಗಳ ರಿಪೇರಿ : ಮನೆಯಲ್ಲಿ ಸಣ್ಣ ಪುಟ್ಟ ವಸ್ತುಗಳು ಹಾಳಾಗಿದ್ದರೆ ರಿಪೇರಿ ಮಾಡಿಕೊಳ್ಳಬೇಕಾಗುತ್ತದೆ. ಬಲ್ಬ್ ಪ್ಯೂಸ್ ಹೋಗಿದ್ದರೆ, ಟ್ಯಾಪ್ ಹಾಳಾಗಿದ್ದರೆ ಇದರ ರಿಪೇರಿಗೆ ಬೇರೆಯವರನ್ನು ಕರೆಯುವ ಬದಲು ತನ್ನ ಬಾಯ್ ಫ್ರೆಂಡ್ ಗೆ ತಿಳಿದಿದ್ದರೆ ಉತ್ತಮ ಎಂದು ನಿರೀಕ್ಷಿಸುತ್ತಾಳೆ ಹುಡುಗಿ.
ಅಡುಗೆ : ಪ್ರತಿದಿನ ಬಾಯ್ ಫ್ರೆಂಡ್ ತನಗಾಗಿ ಅಡುಗೆ ಮಾಡಬೇಕೆಂದೇನಿಲ್ಲ. ಒಂದೊಂದು ದಿನ ತನಗಾಗಿ ಆತ ಕುಕ್ ಮಾಡಲಿ ಅನ್ನೋದು ಹುಡುಗಿ ಆಸೆ. ಮೊಟ್ಟೆ ಬೇಯಿಸಿ ಕೊಟ್ಟರೂ ಸರಿ. ಪ್ರೀತಿಯಿಂದ ಮಾಡಿದರೆ ಖುಷಿಯಿಂದ ತಿನ್ನುತ್ತಾಳೆ ಹುಡುಗಿ.
ಮನೆ ಕೆಲಸ : ಈಗ ಹುಡುಗಿಯರೂ ಹೊರಗಡೆ ಹೋಗಿ ದುಡಿಯುತ್ತಾರೆ. ಮನೆ ಹಾಗೂ ಹೊರಗಡೆ ಎರಡೂ ಕೆಲಸ ಮಾಡುವುದು ಮಹಿಳೆಯರಿಗೂ ಕಷ್ಟ. ಇಂತಹ ಸಮಯದಲ್ಲಿ ಮನೆಯನ್ನು ಚರಂಡಿ ಮಾಡಿಡುವ ಬದಲು ಸ್ವಚ್ಛವಾಗಿಟ್ಟುಕೊಂಡರೆ ಆಕೆ ಖುಷಿಯಾಗುತ್ತಾಳೆ.
ಶರ್ಟ್ ಬಟನ್ : ಸಂಗಾತಿಯ ಶರ್ಟ್ ಬಟನ್ ಕಿತ್ತು ಹೋದಾಗ ರೋಮ್ಯಾಂಟಿಕ್ ಆಗಿ ಶರ್ಟ್ ಬಟನ್ ಹಾಕುವುದು ಸಿನಿಮಾಗಳಲ್ಲಿ ಮಾತ್ರ ಸಾಧ್ಯ. ಕೆಲವೊಮ್ಮೆ ಇದಕ್ಕೆ ಸಮಯವಿರುವುದಿಲ್ಲ. ಪುರುಷರ ಶರ್ಟ್ ನಲ್ಲಿ ಜಾಸ್ತಿ ಬಟನ್ ಇರುವುದರಿಂದ ಅದೇ ಕೆಲಸವಾಗಿಬಿಡುತ್ತದೆ. ಹಾಗಾಗಿ ಅವರೇ ಕಲಿತರೆ ಉತ್ತಮ ಎಂಬ ನಿರೀಕ್ಷೆ ಹುಡುಗಿಯರದ್ದು.