alex Certify ಇತಿಹಾಸ ಪ್ರಸಿದ್ಧ ತಾಣ ಶ್ರೀರಂಗಪಟ್ಟಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಹಾಸ ಪ್ರಸಿದ್ಧ ತಾಣ ಶ್ರೀರಂಗಪಟ್ಟಣ

ನೀವೇನಾದರೂ ವಾರಾಂತ್ಯಕ್ಕೆ ಪುಟ್ಟ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಶ್ರೀರಂಗಪಟ್ಟಣ ಒಂದು ಬೆಸ್ಟ್ ತಾಣ. ಬೆಂಗಳೂರಿನಿಂದ ಅತೀ ಕಡಿಮೆ ಸಮಯದಲ್ಲಿ ಹೋಗಿ ತಲುಪಬಹುದಾಗಿದೆ. ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧಿ ಪಡೆದಿದೆ.

9ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಶ್ರೀ ರಂಗನಾಥಸ್ವಾಮಿಯ ದೇವಾಲಯವು ಇಲ್ಲಿರುವುದರಿಂದ ಈ ಸ್ಥಳಕ್ಕೆ ಶ್ರೀರಂಗಪಟ್ಟಣ ಎಂಬ ಹೆಸರು ಬಂದಿದೆ. ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯ ಶೈಲಿಯ ಸಂಯುಕ್ತ ವಾಸ್ತುಶಿಲ್ಪವನ್ನು ಹೊಂದಿದೆ.

ಈ ಸ್ಥಳವು ಟಿಪ್ಪು ಸುಲ್ತಾನನ ಆಳ್ವಿಕೆಯ ಸಮಯದಲ್ಲಿ ಮೈಸೂರಿನ ರಾಜಧಾನಿಯಾಗಿತ್ತು. ಆದುದರಿಂದಲೇ ಇಲ್ಲಿನ ಕಟ್ಟಡ ಇಂಡೋ-ಮುಸ್ಲಿಂ ಶೈಲಿಯ ಪರಂಪರೆಯಿಂದ ಕೂಡಿದೆ. ಇದರ ಕುರುಹಾಗಿ ಇಲ್ಲಿ ದರಿಯಾ ದೌಲತ್ ಬಾಗ್ ಮತ್ತು ಜಾಮ ಮಸೀದಿಗಳಿವೆ.

ಇಲ್ಲಿ ಸುಂದರವಾದ ಪ್ರವಾಸಿ ತಾಣಗಳನ್ನು ಕಾಣಬಹುದು. ಭಾರತದ ಎರಡನೇ ಅತೀದೊಡ್ಡ ಜಲಪಾತವಾದ ಶಿವನಸಮುದ್ರ ಜಲಪಾತವು ಇಲ್ಲಿದೆ. ಅಷ್ಟೇ ಅಲ್ಲದೇ ಇಲ್ಲಿ 3 ಪ್ರಮುಖ ನದಿಗಳ ಸಂಗಮವಿದೆ. ಕಾವೇರಿ, ಹೇಮಾವತಿ ಮತ್ತು ಕಬಿನಿ ನದಿಗಳು ಕೂಡುವ ಸಂಗಮ ಸ್ಥಳ ನೋಡಲು ವಿಹಂಗಮವಾಗಿವೆ. ಇಲ್ಲಿಗೆ ಬಂದು ಬಲಮುರಿ ಫಾಲ್ಸ್ ಅನ್ನು ನೋಡಲು ಮರೆಯದಿರಿ. ಈ ಮಾನವ ನಿರ್ಮಿತ ಜಲಾಶಯವನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಕೂಡ ಇಲ್ಲಿಗೆ ಹತ್ತಿರದಲ್ಲೇ ಇದೆ.

ಶ್ರೀರಂಗಪಟ್ಟಣವು ಬೆಂಗಳೂರಿನಿಂದ 127 ಕಿ.ಮೀ. ಮತ್ತು ಮೈಸೂರಿನಿಂದ 13 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಸಾರಿಗೆ ವ್ಯವಸ್ಥೆಯ ಅನುಕೂಲವಿದ್ದು, ವಿವಿಧ ಸ್ಥಳಗಳಿಂದ ಬಂದು ತಲುಪಬಹುದಾಗಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣದ ವ್ಯವಸ್ಥೆಯಿದ್ದು, ಅರಾಮವಾಗಿ ಬಂದು ತಲುಪಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...