ಮದುವೆಯಾಗದ ಜೋಡಿಗೂ ಕೆಲವೊಂದು ಅಧಿಕಾರವಿದೆ. ಆದ್ರೆ ಅನೇಕರಿಗೆ ಈ ಅಧಿಕಾರದ ಬಗ್ಗೆ ಗೊತ್ತಿಲ್ಲ. ಹೊಟೇಲ್ ನಲ್ಲಿ ಒಂದೇ ರೂಮಿನಲ್ಲಿ ಮದುವೆಯಾಗದ ಜೋಡಿ ಇರುವುದು ತಪ್ಪಲ್ಲ. ಪೊಲೀಸ್ ಈ ವಿಷ್ಯದ ಬಗ್ಗೆ ನಿಮ್ಮನ್ನು ಪ್ರಶ್ನೆ ಮಾಡಿದ್ರೆ ಭಯ ಪಡಬೇಕಾಗಿಲ್ಲ. ನಿಮಗೆ ಸಿಕ್ಕ ಅಧಿಕಾರದ ಬಗ್ಗೆ ನೀವು ತಿಳಿದಿದ್ದರೆ ಭಯವಿಲ್ಲದೆ ವಾದ ಮಂಡಿಸಬಹುದು.
ಅವಿವಾಹಿತ ಜೋಡಿಗೂ ಕೆಲವೊಂದು ಅಧಿಕಾರಗಳಿದ್ದು, ಅದನ್ನು ತಿಳಿದುಕೊಂಡಿರುವುದು ಉತ್ತಮ. ಮೇಲೆ ಹೇಳಿದಂತೆ ಮದುವೆಯಾಗದ ಮಹಿಳೆ ಹಾಗೂ ಪುರುಷ ಹೊಟೇಲ್ ನಲ್ಲಿ ಒಂದೇ ರೂಮಿನಲ್ಲಿ ಇರಬಹುದು. ಹೊಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ ಅವಿವಾಹಿತ ಜೋಡಿ ಹೊಟೇಲ್ ರೂಂನಲ್ಲಿರಬಾರದೆನ್ನುವ ಬಗ್ಗೆ ಯಾವುದೇ ಕಾನೂನಿಲ್ಲ.
ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳಿಗೆ ಕಿವಿಮಾತು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ
18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಯುವಕ ಹಾಗೂ ಯುವತಿ ಸುರಕ್ಷಿತ ಶಾರೀರಿಕ ಸಂಬಂಧ ಬೆಳೆಸಬಹುದು. ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ಹೊಟೇಲ್ ನಲ್ಲಿರುವ ಜೋಡಿಯನ್ನು ಪೊಲೀಸರು ಬಂಧಿಸಲು ಸಾಧ್ಯವಿಲ್ಲ.
ಮದುವೆಯಾಗದ ಜೋಡಿ ಪತಿ-ಪತ್ನಿಯಂತೆ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಕಾನೂನಿನ ಪ್ರಕಾರ ಇದನ್ನು ಮದುವೆಯೆಂದು ಪರಿಗಣಿಸಲಾಗುವುದು. ಒಂದು ವೇಳೆ ಈ ಸಂದರ್ಭದಲ್ಲಿ ಪುರುಷ ಸಾವನ್ನಪ್ಪಿದ್ರೆ ಆತನ ಸಂಪತ್ತಿಗೆ ಜೊತೆಯಲ್ಲಿದ್ದ ಮಹಿಳೆ ಒಡತಿಯಾಗಲಿದ್ದಾಳೆ. ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ಜೋಡಿಯನ್ನು ವಿವಾಹಿತರೆಂದೇ ಪರಿಗಣಿಸಲಾಗುತ್ತದೆ.