ಶರೀರ ಆರೋಗ್ಯವಾಗಿರಲು ಮನಸ್ಸು ಸಮತೋಲನದಲ್ಲಿರುವುದು ಬಹಳ ಮುಖ್ಯ. ವ್ಯಕ್ತಿಯ ಮನಸ್ಸು ಸಮತೋಲನ ಕಳೆದುಕೊಂಡರೆ ಅನೇಕ ರೀತಿಯ ಸಮಸ್ಯೆ ಎದುರಾಗುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಾಗ ಮೈಗ್ರೇನ್ ರೋಗ ಕೂಡ ಕಾಡುತ್ತದೆ.
ಮನಸ್ಸಿಗೂ ಚಂದ್ರ ಹಾಗೂ ಬುಧ ಗ್ರಹಕ್ಕೂ ಸಂಬಂಧವಿದೆ. ಜಾತಕದಲ್ಲಿ ಚಂದ್ರನ ಸ್ಥಾನ ಸರಿಯಾಗಿಲ್ಲವಾದಲ್ಲಿ ಮೈಗ್ರೇನ್ ಸಮಸ್ಯೆ ಕಾಡುತ್ತದೆ. ಚಂದ್ರನನ್ನು ಮನಸ್ಸಿನ ಸ್ವಾಮಿ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೈಗ್ರೇನ್ ಗೆ ಮುಖ್ಯ ಕಾರಣ ಚಂದ್ರ ಹಾಗೂ ಬುಧ. ಬುಧನನ್ನು ಚಂದ್ರನ ಪುತ್ರ ಎನ್ನಲಾಗುತ್ತದೆ.
ಮೈಗ್ರೇನ್ ಏರುಪೇರಿಗೆ ಬುಧ ಮಹತ್ವದ ಪಾತ್ರ ವಹಿಸುತ್ತಾನೆ. ಚಂದ್ರನ ಮೇಲೆ ಶನಿ, ರಾಹು ಹಾಗೂ ಸೂರ್ಯ ಗ್ರಹ ಪ್ರಭಾವ ಬೀರುತ್ತದೆ. ಒಂದು ವೇಳೆ ಬುದ್ಧಿಯ ಸಂಕೇತ ಬುಧ ಗ್ರಹ ಜಾತಕದಲ್ಲಿ ಬಲವಾಗಿದ್ದರೆ ಯಾವ ಗ್ರಹವೂ ಪರಿಣಾಮ ಬೀರಲು ಸಾಧ್ಯವಿಲ್ಲ.
ಚಂದ್ರನ ಮೇಲೆ ಶನಿ ಪ್ರಭಾವವುಂಟಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ವೇಳೆ ವ್ಯಕ್ತಿ ಆಧ್ಯಾತ್ಮಿಕದತ್ತ ಒಲಿಯುತ್ತಾನೆ. ಸೂರ್ಯ ಹಾಗೂ ಚಂದ್ರ ಒಟ್ಟಿಗೆ ಬಂದಲ್ಲಿ ಮನುಷ್ಯನಿಗೆ ಸುಖ-ದುಃಖದ ವ್ಯತ್ಯಾಸ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಗುರುಗ್ರಹ ಮೈಗ್ರೇನ್ ಕಡಿಮೆ ಮಾಡುತ್ತದೆ.
ಮೈಗ್ರೇನ್ ನಿಂದ ಬಳಲುವವರು ಯೋಗಾಸನ ಹಾಗೂ ಪ್ರಾಣಾಯಾಮವನ್ನು ತಪ್ಪದೆ ಮಾಡಬೇಕು. ಮೈಗ್ರೇನ್ ಗೆ ಪ್ರಾಣಾಯಾಮದ ಜೊತೆ ಮಯೂರ ಆಸನ ಮದ್ದು.