ಸಂಭೋಗದ ನಂತ್ರವೂ ಗರ್ಭಧಾರಣೆಯಾಗ್ತಿಲ್ಲವೆಂದ್ರೆ ಇದ್ರ ಹಿಂದೆ ಅನೇಕ ಕಾರಣಗಳಿರುತ್ತವೆ. ಗರ್ಭಕೋಶದ ಸಮಸ್ಯೆಯೊಂದೇ ಇದಕ್ಕೆ ಕಾರಣವಲ್ಲ. ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸುವ ವಿಧಾನ ಕೂಡ ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತದೆ.
ಸರಿಯಾದ ವಿಧಾನದಲ್ಲಿ ಸಂಬಂಧ ಬೆಳೆಸದಿರುವುದು, ಕಡಿಮೆ ಹಾಗೂ ಅನಿಯಮಿತ ಸೆಕ್ಸ್ ಕೂಡ ಗರ್ಭಧಾರಣೆಗೆ ಅಡ್ಡಿಯುಂಟು ಮಾಡುತ್ತದೆ. ಈ ವಿಷ್ಯ ಅನೇಕ ದಂಪತಿಗೆ ತಿಳಿದಿರುವುದಿಲ್ಲ. ಸಂಭೋಗದ ನಂತ್ರವೂ ಮಕ್ಕಳಾಗಿಲ್ಲವಾದ್ರೆ ತಲೆ ಕೆಡಿಸಿಕೊಳ್ಳುವ ದಂಪತಿ, ವೈದ್ಯರ ಬಳಿ ಹೋಗಿ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಾರೆ.
ಆದ್ರೆ ಅದಕ್ಕೂ ಮೊದಲು ಸಂಬಂಧ ಬೆಳೆಸುವ ಬಗ್ಗೆ ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕಾಗುತ್ತೆ. ಸರಿಯಾದ ರೀತಿಯಲ್ಲಿ ಸಂಬಂಧ ಬೆಳೆಸಿದ್ರೆ ಆದಷ್ಟು ಬೇಗ ಮಕ್ಕಳನ್ನು ಪಡೆಯಬಹುದಾಗಿದೆ.
ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪುರುಷರು ಮಹಿಳೆಯರ ಗರ್ಭಕೋಶಕ್ಕೆ ಆದಷ್ಟು ಹತ್ತಿರದಲ್ಲಿ ವೀರ್ಯವನ್ನು ಬಿಡಬೇಕು. ಹೀಗೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರ್ಯಾಣು ಗರ್ಭಾಶಯ ಸೇರುತ್ತದೆ.
ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಮಹಿಳೆಯರು ನೇರವಾಗಿ ಮಲಗಬೇಕು. ಹಾಗೆ ಕೆಳಗಿನ ಭಾಗಕ್ಕೆ ದಿಂಬನ್ನಿಡಬೇಕು. ಹೀಗೆ 20-30 ನಿಮಿಷ ಮಲಗಬೇಕು. ಇದ್ರಿಂದ ವೀರ್ಯಾಣು ಹೆಚ್ಚಿನ ಪ್ರಮಾಣದಲ್ಲಿ ಗರ್ಭಾಶಯವನ್ನು ಸೇರುತ್ತದೆ.
ಸಂಬಂಧ ಬೆಳೆಸಿದ ತಕ್ಷಣ ಮಹಿಳೆಯರು ಎದ್ದು ನಿಲ್ಲಬಾರದು. ಹೀಗೆ ಮಾಡಿದಲ್ಲಿ ವೀರ್ಯಾಣು ಸರಿಯಾದ ಪ್ರಮಾಣದಲ್ಲಿ ಗರ್ಭಾಶಯವನ್ನು ಸೇರುವುದಿಲ್ಲ.
ಶಾರೀರಿಕ ಸಂಬಂಧ ಬೆಳೆಸಿದ ತಕ್ಷಣ ಮೂತ್ರ ಮಾಡಿದ್ರೆ ಗರ್ಭಧಾರಣೆಯಾಗಲ್ಲ ಎಂದು ಕೆಲವರು ನಂಬಿದ್ದಾರೆ. ಆದ್ರೆ ವೈದ್ಯರು ಇದನ್ನು ಅಲ್ಲಗಳೆದಿದ್ದಾರೆ. ಮೂತ್ರ ಮಾಡಿದ್ರೆ ಅನೇಕ ಲೈಂಗಿಕ ರೋಗದಿಂದ ಮುಕ್ತಿ ಸಿಗುತ್ತೆ ಎಂಬುದು ತಜ್ಞರ ಅಭಿಪ್ರಾಯ.
ಸಂಬಂಧ ಬೆಳೆಸಿದ ನಂತ್ರ ಮಹಿಳೆಯರು ಎರಡೂ ಕಾಲನ್ನು ಮೇಲಕ್ಕೆತ್ತಿ ಮಲಗುವುದ್ರಿಂದಲೂ ಗರ್ಭಧಾರಣೆ ಸುಲಭವಾಗುತ್ತದೆ.