ನ್ಯೂಯಾರ್ಕ್ ನಿಕ್ಸ್ ತಂಡದ ಪ್ರಸಿದ್ಧ ಬಾಸ್ಕೆಟ್ಬಾಲ್ ಆಟಗಾರ ಜೆಲನ್ ಬ್ರನ್ಸನ್ ಹಾಗೂ ಎನ್ಬಿಎ (NBA) ಮಹಿಳಾ ರೆಫರಿ ಸಿಮೋನ್ ಜೆಲ್ಕ್ಸ್ ನಡುವೆ ಪಂದ್ಯದ ವೇಳೆ ನಡೆದ ಆಕಸ್ಮಿಕ ಮತ್ತು ಮುಜುಗರದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಫಿಲಡೆಲ್ಫಿಯಾ 76ಆರ್ಸ್ ತಂಡದ ವಿರುದ್ಧದ ರೋಚಕ ಪಂದ್ಯದಲ್ಲಿ ಈ ವಿಚಿತ್ರ ಸನ್ನಿವೇಶ ಜರುಗಿದೆ.
ಪಂದ್ಯದ ವೇಳೆ ಬಾಸ್ಕೆಟ್ ಕಡೆಗೆ ವೇಗವಾಗಿ ನುಗ್ಗುತ್ತಿದ್ದ ಬ್ರನ್ಸನ್, ಎದುರಾಳಿ ಆಟಗಾರ ಜೋಯಲ್ ಎಂಬಿಡ್ ತಾಗಿದ್ದರಿಂದ ತಮ್ಮ ಸಮತೋಲನವನ್ನು ಕಳೆದುಕೊಂಡರು. ಬೌಂಡರಿ ಲೈನ್ ಕಡೆಗೆ ಎಡವಿ ಬೀಳುತ್ತಿದ್ದ ಬ್ರನ್ಸನ್ ಅವರನ್ನು ಬೀಳದಂತೆ ಹಿಡಿಯಲು ಹತ್ತಿರದಲ್ಲೇ ನಿಂತಿದ್ದ ಮಹಿಳಾ ರೆಫರಿ ಸಿಮೋನ್ ಜೆಲ್ಕ್ಸ್ ಯತ್ನಿಸಿದರು. ಈ ವೇಳೆ ಸಮತೋಲನ ಕಾಯ್ದುಕೊಳ್ಳಲು ಯತ್ನಿಸಿದ ಬ್ರನ್ಸನ್ ಆಕಸ್ಮಿಕವಾಗಿ ರೆಫರಿಯತ್ತ ಕೈ ಚಾಚಿದ್ದು, ಅದೇ ಕ್ಷಣದಲ್ಲಿ ರೆಫರಿಯ ಕೈ ಬ್ರನ್ಸನ್ ಅವರ ಗುಪ್ತಾಂಗದ ಭಾಗಕ್ಕೆ ತಾಗಿದೆ.
ಈ ಕೌತುಕದ ಹಾಗೂ ವಿಚಿತ್ರ ಸ್ಪರ್ಶದಿಂದ ಇಬ್ಬರೂ ಕೆಲ ಸೆಕೆಂಡುಗಳ ಕಾಲ ತೀವ್ರ ಆಶ್ಚರ್ಯ ಹಾಗೂ ಮುಜುಗರಕ್ಕೆ ಒಳಗಾದರು. ತಕ್ಷಣವೇ ಹಿಂತಿರುಗಿ ನೋಡಿದ ಬ್ರನ್ಸನ್ ಅಚ್ಚರಿ ವ್ಯಕ್ತಪಡಿಸಿದರೂ, ಪರಿಸ್ಥಿತಿಯನ್ನು ತಿಳಿಗೊಳಿಸಿ ಪಂದ್ಯವನ್ನು ಮುಂದುವರಿಸಿದರು. ಬ್ರನ್ಸನ್ ನಂತರ ಫ್ರೀ-ಥ್ರೋ ಲೈನ್ಗೆ ತೆರಳಿದರು.
ಲೈವ್ ಬಾಸ್ಕೆಟ್ಬಾಲ್ ಪಂದ್ಯಗಳಲ್ಲಾಗುವ ಇಂತಹ ಆಕಸ್ಮಿಕ ಹಾಗೂ ತಮಾಷೆಯ ಘಟನೆಗಳನ್ನು ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕ್ರೀಡಾ ಮನೋಭಾವದಿಂದ ಪಂದ್ಯವನ್ನು ಮುಂದುವರಿಸಿದ್ದು ವಿಶೇಷವಾಗಿತ್ತು.

